Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Agri info 12 ವರ್ಷಗಳಲ್ಲಿ ಕೃಷಿ ಉತ್ಪಾದನೆ ಭಾರೀ ಏರಿಕೆ… ಅಗ್ರಸ್ಥಾನಕ್ಕೇರಿದ ಬಾಳೆಹಣ್ಣು, ತರಕಾರಿಯಲ್ಲಿ ಆಲೂಗಡ್ಡೆ ನಂ.1
ದೇಶ

Agri info 12 ವರ್ಷಗಳಲ್ಲಿ ಕೃಷಿ ಉತ್ಪಾದನೆ ಭಾರೀ ಏರಿಕೆ… ಅಗ್ರಸ್ಥಾನಕ್ಕೇರಿದ ಬಾಳೆಹಣ್ಣು, ತರಕಾರಿಯಲ್ಲಿ ಆಲೂಗಡ್ಡೆ ನಂ.1

Share
2 Min Read
SHARE

newsics.com

ಭಾರತದ ಕೃಷಿ ಹಾಗೂ ಸಂಬಂಧಿತ ವಲಯಗಳಲ್ಲಿನ ಒಟ್ಟು ಕೃಷಿ ಉತ್ಪಾದನೆಯ ಮೌಲ್ಯ ವರ್ಧನೆ ಅಥವಾ ಜಿವಿಎ ಕಳೆದ 12 ವರ್ಷದಲ್ಲಿ ಕನಿಷ್ಠ ಮೂರು ಪಟ್ಟು ಹೆಚ್ಚಾಗಿರುವುದು ತಿಳಿದುಬಂದಿದೆ. 2012ರಲ್ಲಿ ಸುಮಾರು 15,00,000 ಕೋಟಿ ರೂ. ಇದ್ದ ಕೃಷಿ ಜಿವಿಎ 2024ರಲ್ಲಿ 48,00,000 ಕೋಟಿ ರೂ.ಗಳಿಗೆ ಏರಿಕೆ ಕಂಡಿದೆ.

ಭಾರತದಲ್ಲಿ ಕೈಗಾರೀಕರಣ ವೇಗವಾಗಿ ನಡೆಯುತ್ತಿದ್ದರೂ ಕೃಷಿ ಇಂದಿಗೂ ಭಾರತದ ಆರ್ಥಿಕತೆಯ ಬೆನ್ನೆಲುಬಾಗಿ ಉಳಿದಿದೆ. ಇದು ಜಿಡಿಪಿಗೆ ಸುಮಾರು ಶೇ. 16ರಷ್ಟು ಕೊಡುಗೆ ನೀಡುತ್ತಿದ್ದರೆ, ಶೇ. 46ರಷ್ಟು ಜನರಿಗೆ ಇದೇ ಜೀವನಾಧಾರವಾಗಿದೆ.

ಇದು ಕೃಷಿ ಜಿವಿಎ ಆದರೆ, ಕೃಷಿ ಉತ್ಪಾದನೆ ಅಥವಾ ಜಿವಿಓ (GVO – Gross Value Output) ಈ 12 ವರ್ಷದಲ್ಲಿ ಶೇ. 55ರಷ್ಟು ಹೆಚ್ಚಾಗಿದೆ. 2011-12ರಲ್ಲಿ 19.08 ಲಕ್ಷ ಕೋಟಿ ರೂ ಜಿವಿಒ ಹೊಂದಿದ್ದ ಕೃಷಿ ವಲಯ, 2023-24ರಲ್ಲಿ 29.49 ಲಕ್ಷ ಕೋಟಿ ರೂ ಆಗಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಕೃಷಿ ಉತ್ಪಾದನೆ ಅಥವಾ ಜಿವಿಒ ಕೂಡ ಶೇ. 55ರಷ್ಟು ಏರಿಕೆ ಕಂಡಿದ್ದು 2011-12 ರಲ್ಲಿ ಇದ್ದ 1,908 ಸಾವಿರ ಕೋಟಿ ರೂ.ನಿಂದ 2023-24ರಲ್ಲಿ ಇದು 2,949 ಸಾವಿರ ಕೋಟಿ ರೂ.ಗೆ ಮುಟ್ಟಿದೆ.

ಉತ್ತಮ ಮುಂಗಾರು, ನೀರಾವರಿ ಸೌಲಭ್ಯ, ಪಿಎಂ ಕಿಸಾನ್‌ನಂತಹ ಸರ್ಕಾರಿ ಯೋಜನೆಗಳು ರೈತರ ಉತ್ಪಾದನೆಗೆ ಹೆಚ್ಚಿನ ರೀತಿಯಲ್ಲಿ ನೆರವಾಗಿವೆ. ಇದು ರೈತರ ಆದಾಯ ಹೆಚ್ಚಲೂ ಪ್ರಮುಖ ಕಾರಣ ಎಂದು ವಿಶ್ಲೇಷಕರು ಹೇಳಿದ್ದಾರೆ.

ಬೆಳೆ ಉತ್ಪಾದನೆಯು ಕೃಷಿ ಜಿಒವಿಯಲ್ಲಿ ದೊಡ್ಡ ಪಾಲು ಹೊಂದಿದ್ದು, ಶೇ. 54ಕ್ಕಿಂತ ಹೆಚ್ಚಾಗಿದೆ. ಇದರಲ್ಲಿ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳು ಅರ್ಧಕ್ಕಿಂತ ಹೆಚ್ಚಿವೆ. ಭತ್ತ ಮತ್ತು ಗೋಧಿ ಧಾನ್ಯ ವಿಭಾಗದಲ್ಲಿ ಶೇ. 85ರಷ್ಟು ಕೊಡುಗೆ ನೀಡುತ್ತಿವೆ.

ಮಾವಿನ ಹಣ್ಣನ್ನು ಹಿಂದಿಕ್ಕಿದ ಬಾಳೆಹಣ್ಣು

ಇಲ್ಲಿಯವರೆಗೆ ಒಟ್ಟಾರೆ ಹಣ್ಣುಗಳ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಮಾವನ್ನು ಬಾಳೆಹಣ್ಣು ಹಿಂದಿಕ್ಕಿದೆ. ಬಾಳೆಹಣ್ಣಿನ ಜಿವಿಒ 47 ಸಾವಿರ ಕೋಟಿ ರೂ. ಆಗಿದ್ದರೆ, ಮಾವಿನಹಣ್ಣಿನ ಜಿವಿಒ 46.1 ಸಾವಿರ ಕೋಟಿ ರೂ. ಇದೆ.

ತರಕಾರಿಗಳ ವಿಭಾಗದಲ್ಲಿ ಆಲೂಗಡ್ಡೆ ಮೊದಲ ಸ್ಥಾನದಲ್ಲಿದ್ದು, ಇದರ ಜಿವಿಒ 21.3 ಸಾವಿರ ಕೋಟಿ ರೂ.ನಿಂದ 37.2 ಸಾವಿರ ಕೋಟಿ ರೂ.ಗೆ ಏರಿಕೆ ಕಂಡಿದೆ.

ದೇಶದ ಒಟ್ಟು ಕೃಷಿ ಉತ್ಪಾದನೆಯಲ್ಲಿ ಉತ್ತರ ಪ್ರದೇಶ ಮುಂಚೂಣಿಯಲ್ಲಿದೆ. ದೇಶದ ಶೇ 17 ಕೃಷಿ ಜಿವಿಒ ಉತ್ತರಪ್ರದೇಶದ ಕೊಡುಗೆಯಾಗಿದೆ. ಮಧ್ಯಪ್ರದೇಶ, ಪಂಜಾಬ್, ತೆಲಂಗಾಣ ಮತ್ತು ಹರ್ಯಾಣ ರಾಜ್ಯಗಳು ಟಾಪ್-5ರಲ್ಲಿದ್ದು, ಈ ಪಂಚರಾಜ್ಯಗಳು ದೇಶದ 53 ಕೃಷಿ ಉತ್ಪನ್ನಗಳನ್ನು ತಂದುಕೊಟ್ಟಿವೆ.

ದೇಶದಲ್ಲಿ ಜಾನುವಾರುಗಳ ವಲಯ ಕೂಡ ಬೆಳವಣಿಗೆ ಆಗಿದ್ದು, ಜಿವಿಒ 488 ಸಾವಿರ ಕೋಟಿ ರೂ.ನಿಂದ 919 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಹಾಲಿನ ಉತ್ಪಾದನೆ ಹೆಚ್ಚಾಗಿದ್ದು, ಮಾಂಸದ ಉತ್ಪಾದನೆ ಕೂಡ ಏರಿಕೆ ಕಂಡಿದೆ.

ಹೂವಿನ ಕೃಷಿ ಕೂಡ ಹಿಂದೆ ಬಿದ್ದಿಲ್ಲ. 17.4 ಸಾವಿರ ಕೋಟಿ ರೂ. ಇದ್ದ ಹೂವಿನ ಜಿವಿಒ 28.1 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ.

ಬಟಾಣಿ ಬೇಯಿಸುತ್ತಿದ್ದ ಪಾತ್ರೆಗೆ ಬಿದ್ದು ಮಗು ಸಾವು

TAGGED:#Agricultural #production #increased #banana #mango
Share This Article
Facebook Twitter Copy Link Print
Previous Article ಬಟಾಣಿ ಬೇಯಿಸುತ್ತಿದ್ದ ಪಾತ್ರೆಗೆ ಬಿದ್ದು ಮಗು ಸಾವು
Next Article Actor Sudeep ಸುದೀಪ್ ಫ್ಯಾನ್ಸ್‌ಗೆ ಗುಡ್ ನ್ಯೂಸ್

Popular Posts

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read

You Might Also Like

ದೇಶಪ್ರಮುಖ

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?