newsics.com
ಫಿರೋಜಾಪುರ್: ಯುವ ಕ್ರಿಕೆಟಿಗನೋರ್ವ ಮೈದಾನದಲ್ಲಿ ಸಿಕ್ಸರ್ ಬಾರಿಸಿದ ಮರುಕ್ಷಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಂಜಾಬ್‌ನ ಫಿರೋಜಾಪುರ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದೆ.
ಮೃತ ಕ್ರಿಕೆಟರ್ ಹರ್ಜಿತ್ ಸಿಂಗ್ ಸಾವಿಗೂ ಮೊದಲು ಬ್ಯಾಟ್ ಬೀಸಿ ಸಿಕ್ಸರ್ ಹೊಡೆದಿದ್ದು, ಕ್ಷಣದಲ್ಲಿ ಆತ ಕುಸಿದು ಬಿದ್ದಿದ್ದು, ಆತನ ಜೀವವೇ ಹೊರಟು ಹೋಗಿದೆ.
ವೀಡಿಯೋದಲ್ಲಿ ಬ್ಯಾಟ್ಸ್‌ಮನ್ ಆತ ವೇಗವಾಗಿ ಬರುತ್ತಿರುವ ಚೆಂಡನ್ನು ಬೀಸಿ ಹೊಡೆದಿದ್ದು, ಇದಾಗಿ ಕ್ಷಣಗಳಲ್ಲಿ ಆತ ಕುಸಿದು ಬಿದ್ದಿದ್ದಾನೆ. ಆತ ಅಲ್ಲೇ ಪ್ರಜ್ಞಾಶೂನ್ಯನಾಗಿದ್ದು, ಉಳಿದ ಆಟಗಾರರು ಆತನ ಬಳಿ ಓಡಿ ಬರುವುದನ್ನು ಕಾಣಬಹುದು. ಅಲ್ಲದೇ ಆತನಿಗೆ ಸಿಪಿಆರ್ ಕೂಡ ಮಾಡಿದ್ದಾರೆ. ಆದರೆ ಆತನಿಗೆ ಮರಳಿ ಪ್ರಜ್ಞೆ ಬಂದಿಲ್ಲ. ಆತ ಸ್ಥಳದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಹರ್ಜಿತ್ ಸಿಂಗ್ ಫಿರೋಜಾಪುರ್‌ನ ಡಿಎವಿ ಸ್ಕೂಲ್‌ನಲ್ಲಿ ಕ್ರಿಕೆಟ್ ಮ್ಯಾಚ್ ಆಟವಾಡುತ್ತಿದ್ದ.
Soldier dies while ploughing ಹಾಸನದಲ್ಲಿ ನಿಲ್ಲದ ಹೃದಯಾಘಾತ ಸಾವಿನ ಸರಣಿ: ಉಳುಮೆ ಮಾಡುತ್ತಿದ್ದ ಯೋಧ ಸಾವು