Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ತಮಿಳುನಾಡು, ಕೇರಳ ದುಷ್ಕರ್ಮಿಗಳ ಜತೆ ಕೈಜೋಡಿಸಿದ್ರಾ ವ್ಯಾಘ್ರ ಹಂತಕರು?; ಹುಲಿಗಳ ಜೀವಕ್ಕೆ ಸಗಣಿ ಮಾಫಿಯಾ ಕುತ್ತು 
ಕರ್ನಾಟಕ

ತಮಿಳುನಾಡು, ಕೇರಳ ದುಷ್ಕರ್ಮಿಗಳ ಜತೆ ಕೈಜೋಡಿಸಿದ್ರಾ ವ್ಯಾಘ್ರ ಹಂತಕರು?; ಹುಲಿಗಳ ಜೀವಕ್ಕೆ ಸಗಣಿ ಮಾಫಿಯಾ ಕುತ್ತು 

Share
2 Min Read
SHARE

newsics.com

ಚಾಮರಾಜನಗರ: ‘ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಐದು ಹುಲಿಗಳ ಸಾವಿಗೆ ತಮಿಳುನಾಡು ಜಾನುವಾರು ಮಾಲೀಕರ ‘ಸಗಣಿ ಮಾಫಿಯಾ’ ಪರೋಕ್ಷ ಕಾರಣವಾಯಿತೇ’ ಎಂಬ ಅನುಮಾನ ದಟ್ಟವಾಗಿದೆ.

ವಿಷ ಹಾಕಿದ್ದ ಜಾನುವಾರು ಕಳೇಬರ ತಿಂದು ಹುಲಿಗಳು ಮೃತಪಟ್ಟಿವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿರುವ ಬೆನ್ನಲ್ಲೇ, ರಾಜ್ಯದಲ್ಲಿ ತಮಿಳುನಾಡು ಜಾನುವಾರು ಹಾವಳಿಯ ವಿಚಾರ ಮುನ್ನೆಲೆಗೆ ಬಂದಿದೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಸಾವು ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ತಾಯಿ ಹಾಗೂ ನಾಲ್ಕು ಮರಿಗಳು ಅಸುನೀಗಿದ್ದ ದೃಶ್ಯ ಎಂಥವರ ಹೃದಯವನ್ನೂ ಕರಗುವಂತೆ ಮಾಡಿತ್ತು. ಈ ಹುಲಿಗಳಿಗೆ ವಿಷ ಹಾಕಿ ಕೊಂದವರು ಅದೇ ಮಾದಪ್ಪನ ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಮಂದಿ ಎಂದರೆ ಊಹಿಸುವುದೂ ಅಸಾಧ್ಯ.

ಹನೂರು ತಾಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ ಕೊಪ್ಪ ಗ್ರಾಮದ ಮಾಹಾರಾಜು, ನಾಗರಾಜು ಹಾಗೂ ಕುನ್ನಪ್ಪ ಬಂತ ಆರೋಪಿಗಳು. ಹುಲಿಗಳ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ಹಂತದಲ್ಲಿ ಅವುಗಳು ವಿಷಪ್ರಾಶನದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಮೂವರು ಆರೋಪಿಗಳನ್ನು ಬಂಸಿ, ನ್ಯಾಯಾಂಗ ಬಂಧನ ಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಅಕಾರಿಗಳು ತಿಳಿಸಿದ್ದಾರೆ.

ಇನ್ನು ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವವರಿಗೆ ದಶಕಗಳಿಂದಲೂ ಜಾನುವಾರು ಸಾಕಣೆಯೇ ಪ್ರಮುಖ ವೃತ್ತಿ. ಸ್ವಂತ ಜಾನುವಾರು ಹೊಂದಿರುವವರೂ ವಿರಳ. ಬಹುತೇಕರು ತಮಿಳುನಾಡಿನ ಜಾನುವಾರುಗಳನ್ನು ಮೇಯಿಸುತ್ತಿದ್ದಾರೆ.

‘ತಮಿಳುನಾಡಿನ ಸಾವಿರಾರು ಹಸುಗಳನ್ನು ನಿಯಮಬಾಹಿರವಾಗಿ ಕಾಡಿನೊಳಗೆ ಮೇಯಿಸಲು ನುಗ್ಗಿಸುತ್ತಿರುವುದಿಂದ ಮಾನವ–ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಜಾನುವಾರುಗಳ ಮೇಲೆ ದಾಳಿ ಮಾಡುವ ಕಾಡು ಪ್ರಾಣಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಕಳೇಬರಕ್ಕೆ ವಿಷ ಹಾಕಲಾಗುತ್ತಿದೆ’ ಎಂದು ಅರಣ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸ್ಥಳೀಯರೇ ಹಸುಗಳನ್ನು ಮೇಯಿಸುವುದರಿಂದ ಜಾನುವಾರುಗಳ ನಿಜವಾದ ‘ಮಾಲೀಕರು’ ಯಾರೆಂದು ಗುರುತಿಸುವುದು ಸವಾಲು. ಅರಣ್ಯ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಹಿಂದೆ ಸಮೀಕ್ಷೆ ಮಾಡಿದಾಗ 6,500ಕ್ಕೂ ಹೆಚ್ಚು ಜಾನುವಾರುಗಳಿದ್ದವು. 5ಸಾವಿರಕ್ಕೂ ಹೆಚ್ಚು ಹಸುಗಳ ಮಾಲೀಕರು ತಮಿಳುನಾಡಿನವರು ಎಂದು ಖಚಿತವಾದರೂ, ಕ್ರಮ ಕೈಗೊಳ್ಳಲು ಸ್ಥಳೀಯರು, ಜನಪ್ರತಿನಿಧಿಗಳು ವಿರೋಧಿಸಿದರು’ ಎಂದು ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಕಾಡಂಚಿನ ಗ್ರಾಮಸ್ಥರಿಗೆ ಜಾನುವಾರು ಸಾಕಾಣಿಕೆ ಹೊಣೆಗಾರಿಕೆ ವಹಿಸುವ ತಮಿಳುನಾಡಿನವರು, ಮಾಸಿಕ ಹಣ ನೀಡಿ, ಲೋಡ್‌ಗಟ್ಟಲೆ ಸಗಣಿ ಗೊಬ್ಬರವನ್ನು ಮಾರಿ ಲಾಭ ಗಳಿಸುತ್ತಾರೆ. ಸ್ಥಳೀಯರಿಗೆ ಹಣದ ಜೊತೆಗೆ ಹಾಲಷ್ಟೇ ಸಿಗುತ್ತದೆ.

ಪಾಲಾರ್‌ನ ನದಿ ಮೂಲಕ ಹಸುಗಳು ಈ ‘ಜಾಗಕ್ಕೆ ಬರುತ್ತಿವೆ ಎಂಬ ಮಾಹಿತಿ ಸಹ ಅರಣ್ಯ ಇಲಾಖೆಗೂ ಇತ್ತು. ಅಲ್ಲದೇ ಈ ಪ್ರದೇಶಗಳಲ್ಲಿ ಹೆಚ್ಚು ತಮಿಳುನಾಡು ನೋಂದಣಿಯ ವಾಹನಗಳು ಓಡಾಡುತ್ತಿವೆ. ಹಸುಗಳನ್ನು ಕಾಡಿಗೆ ಬಿಟ್ಟ ನಂತರ ಸಗಣಿಯನ್ನು ಸಹ ಅರಣ್ಯದಲ್ಲಿಯೇ ಸಂಗ್ರಹಿಸಿ, ವಾಹನಗಳಲ್ಲಿ ತುಂಬಿಕೊಂಡು ಹೋಗಲಾಗುತ್ತಿದೆ.
ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ ಹೊಂದಿರುವ ಈ ಸ್ವದೇಶಿ ಹಸುಗಳು ಕಾಡಿನಲ್ಲಿ ಮೇಯುತ್ತಿದ್ದಾಗ ಹುಲಿ ಹಾಗೂ ಕಾಡು ಪ್ರಾಣಿಗಳ ದಾಳಿಗೆ ತುತ್ತಾಗುವುದು ಸಹಜ.

ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ಹಸುಗಳ ಸಂಖ್ಯೆ ಕಡಿಮೆಯಾದರೆ ಹಸು ಗುತ್ತಿಗೆ ಪಡೆದುಕೊಂಡವರು ಹಣ ಕೊಡಬೇಕಾಗುತ್ತದೆ. ಅಲ್ಲದೇ ಸಗಣಿಯೂ ಕಡಿಮೆಯಾಗುತ್ತದೆ ಎಂಬ ದುರಾಲೋಚನೆಯಿಂದ ಇಂಥ ಕೃತ್ಯಕ್ಕೆ ಇಲ್ಲಿನ ನಿವಾಸಿಗಳು ಕೈಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಹಿಂದಿ ಹೇರಿಕೆ ಹಿನ್ನೆಲೆ ತ್ರಿಭಾಷಾ ನೀತಿಯನ್ನೇ ರದ್ದುಪಡಿಸಿದ ಮಹಾರಾಷ್ಟ್ರ ಸರ್ಕಾರ

TAGGED:Did the tiger killers join hands with Tamil Nadu and Kerala criminals?; The dung mafia is killing the tigers
Share This Article
Facebook Twitter Copy Link Print
Previous Article ಹಿಂದಿ ಹೇರಿಕೆ ಹಿನ್ನೆಲೆ ತ್ರಿಭಾಷಾ ನೀತಿಯನ್ನೇ ರದ್ದುಪಡಿಸಿದ ಮಹಾರಾಷ್ಟ್ರ ಸರ್ಕಾರ
Next Article Kannada Sahitya Sammelana 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ

Popular Posts

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read
ಕರ್ನಾಟಕಪ್ರಮುಖ

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read
ಕರ್ನಾಟಕಪ್ರಮುಖ

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

Social Networks

Facebook-f Instagram Twitter
Welcome Back!

Sign in to your account

Lost your password?