newsics.com
ಹಾಸನ: ಹೃದಯಾಘಾತದಿಂದ ಯುವತಿ ಸಾವನ್ನಪ್ಪಿರುವ ಘಟನೆ ಬ್ಯಾಟರಾಯನಪುರದ ಹೊಳೆನರಸೀಪುರ ತಾಲೂಕಿನ ಕಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಪ್ರಿಯಾ (22) ಹೃದಯಾಘಾತಕ್ಕೆ ಬಲಿಯಾದ ಯುವತಿ.ಮೃತ ಸುಪ್ರಿತಾ ಕೃಷ್ಣಮೂರ್ತಿ ಹಾಗೂ ರೂಪ ದಂಪತಿ ಮಗಳು. ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಈ ಕುಟುಂಬ ವಾಸವಿತ್ತು. ಸುಪ್ರಿತಾ ಮುಕ್ತ ವಿವಿಯಲ್ಲಿ ಪದವಿ ಓದುತ್ತಿದ್ದಳು. ವಿದ್ಯಾಭ್ಯಾಸದ ಜೊತೆಗೆ ಕೆಲಸ ಕೂಡ ಮಾಡುತ್ತಿದ್ದಳು. ನಿನ್ನೆ ಮನೆಯಲ್ಲಿದ್ದ ವೇಳೆ ಸುಪ್ರಿತಾಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಆ ಕೂಡಲೇ ಪೋಷಕರ ಮುಂದೆಯೇ ಎದೆನೋವು ಎಂದು ಹೇಳಿ ಸುಪ್ರಿತಾ ಕುಸಿದು ಬಿದ್ದಿದ್ದಾಳೆ.
ಆಗ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಸುಪ್ರಿತಾ ಹೃದಯಾಘಾತದಿಂದ ಉಸಿರು ನಿಲ್ಲಿಸಿದ್ದಳು