newsics.com
ಬಿಗ್ ಬಾಸ್ ಕನ್ನಡ ಸೀಸನ್ 11’ರ ಮಧ್ಯದಲ್ಲೇ ತಾವು ‘ಬಿಗ್ ಬಾಸ್’ ನಡೆಸಿಕೊಡೋದಿಲ್ಲ ಎಂದು ಕಿಚ್ಚ ಸುದೀಪ್ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ಕೇವಲ ಒಂದು ಬಾರಿಯಲ್ಲ ಎರಡೆರಡು ಬಾರಿ ಟ್ವೀಟ್ ಮಾಡಿ ಈ ಮಾತುಗಳನ್ನು ಹೇಳಿದ್ದರು. ಈಗ ಬಿಗ್ ಬಾಸ್ 12ನೇ ಸೀಸನ್ ಆರಂಭಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ.
ಸುದೀಪ್ ಮತ್ತೆ ನಿರೂಪಣೆ ಮಾಡುತ್ತಾರೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಅವರು ಮಾಡೋದಿಲ್ಲ ಎನ್ನುತ್ತಿದ್ದಾರೆ. ಈ ಮಧ್ಯೆ ಸುದೀಪ್ ಅವರೇ ಈ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸುದೀಪ್,ಈ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ, ತುಂಬಾ ಕಾಂಪ್ಲಿಕೇಶನ್ಗಳು ಚರ್ಚೆ ಇದೆ. ಊಹಾಪೋಹಗಳಿವೆ. ಸಾಕಷ್ಟು ಈ ಬಗ್ಗೆ ಇವತ್ತಿಗೂ ಚರ್ಚೆಗಳು ಆಗುತ್ತಿವೆ ಯಾವ ವೇದಿಕೆಯಲ್ಲಿ ಉತ್ತರಗಳ ಸಮೇತ ನಾನು ಅದನ್ನು ಹೇಳ್ತಿನೋ, ಯಾಕೆ, ಏನೆಲ್ಲಾ ಆಯ್ತು ಎಂದು. ಆಗ ಅದಕ್ಕೆ ಸರಿಯಾದ ಆರಂಭ, ಅಂತ್ಯ ಸಿಗುತ್ತದೆ. ಇವತ್ತು ಏನೇ ಮಾತನಾಡಿದರೂ ಅದು ಅರ್ಧಬರ್ಧ ಟಾಪಿಕ್ ಆಗುತ್ತೆ. ಎಲ್ಲಾ ಕ್ಲಿಯರ್ ಆದಮೇಲೆ ಮಾತಾಡುವೆ” ಎಂದಿದ್ದಾರೆ.