Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Ghar vapsi ಕನಸಲ್ಲಿ ಆಂಜನೇಯ ಹೇಳಿದ್ದೇನು? 4 ವರ್ಷ ಬಳಿಕ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಕ್ರಿಶ್ಚಿಯನ್ ಕುಟುಂಬ!
ಕರ್ನಾಟಕಪ್ರಮುಖ

Ghar vapsi ಕನಸಲ್ಲಿ ಆಂಜನೇಯ ಹೇಳಿದ್ದೇನು? 4 ವರ್ಷ ಬಳಿಕ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಕ್ರಿಶ್ಚಿಯನ್ ಕುಟುಂಬ!

Share
2 Min Read
SHARE

newsics.com

ಯಾದಗಿರಿ: ನಗರದಲ್ಲಿ‌ ವಾಸವಿರುವ ಕುಟುಂಬವೊಂದು ಘರ್ ವಾಪ್ಸಿ ಮಾಡಿದೆ. ಇದಕ್ಕೆ ಆಂಜನೇಯ ಕಾರಣ ಎಂಬುದು ಅಚ್ಚರಿಯ ವಿಚಾರ.

ಹಿಂದೂ ಧರ್ಮ ತ್ಯಜಿಸಿ ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ್ದ ಯಾದಗಿರಿಯ ಗಿರಿ ನಗರ ಬಡಾವಣೆ ವೆಂಕಟೇಶ ಎನ್ನುವರ ಕುಟುಂಬ ಇದೀಗ ಘರ್ ವಾಪ್ಸಿ ಮಾಡಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ವೆಂಕಟೇಶ್ ಚೇತರಿಸಿಕೊಂಡ ಕೂಡಲೇ ಅದೇನಾಯ್ತೋ ಏನೋ ಕುಟುಂಬ ಸಮೇತ ಕ್ರಿಶ್ಚಿಯನ್ ಧರ್ಮ ಸ್ವೀಕಾರ ಮಾಡಿದ್ದರು. ಹಿಂದೂ ಧರ್ಮ ಬಿಟ್ಟು ಹೋಗಿದ್ದಕ್ಕೆ ಕನಸಲ್ಲಿ ಆಂಜನೇಯ ಬರುತ್ತಿದ್ದನಂತೆ. ಇದರಿಂದ ಬೆಚ್ಚಿಬಿದ್ದ ವೆಂಕಟೇಶ್ ಕುಟುಂಬ ಸಮೇತ ವಾಪಸ್ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಸ್ವಾಮೀಜಿ ಮೂಲಕ ಪೂಜೆ ಮಾಡಿ ರುದ್ರಾಕ್ಷಿ ಧಾರಣೆ ಮಾಡಿಸಿಕೊಂಡು ಘರ್ ವಾಪ್ಸಿ ಮಾಡಿದೆ.

ಗಿರಿ ನಗರ ಬಡಾವಣೆಯಲ್ಲಿ ಕೇವಲ ಅಲೆಮಾರಿ ಬುಡುಗ ಜಂಗಮ ಸಮುದಾಯದ ಜನ ವಾಸ ಮಾಡುತ್ತಾರೆ. ಈ ಬಡಾವಣೆಯ ಸಾಕಷ್ಟು ಕುಟುಂಬಗಳು ನಾನಾ ಕಾರಣದಿಂದ ಹಿಂದೂ ಧರ್ಮವನ್ನ ಬಿಟ್ಟು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದಾರೆ. ವೆಂಕಟೇಶ ಕುಟುಂಬ ಕೂಡ ಕಳೆದ ನಾಲ್ಕು ವರ್ಷಗಳ ಹಿಂದೆ ಹಿಂದೂ ಧರ್ಮಕ್ಕೆ ವಿದಾಯ ಹೇಳಿ ಕ್ರಿಶ್ಚಿಯನ್ ಧರ್ಮಕ್ಕೆ ಇಡೀ ಕುಟುಂಬ ಸಮೇತವಾಗಿ ಸೇರಿದ್ದ. ತನ್ನ ಜತೆ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕಾರ ಮಾಡಿದ್ದ.

ನಾಲ್ಕು ವರ್ಷಗಳ ಹಿಂದೆ ಈ ವೆಂಕಟೇಶ್‌ಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಇದೇ ಕಾರಣಕ್ಕೆ ಪರಿಚಯಸ್ಥರ ಮೂಲಕ ಆಂಧ್ರದ ಅನಂತಪುರದ ಗುತ್ತಿ ಚರ್ಚ್‌ಗೆ ಹೋಗಿದ್ದ. ಇದಾದ ಬಳಿಕ ವೆಂಕಟೇಶ ಆರೋಗ್ಯದಲ್ಲಿ ಸುಧಾರಣೆ ಆಗಿದೆ. ಹೀಗಾಗಿ ಯೇಸು ಸ್ವಾಮಿಯಿಂದಲೇ ನನಗೆ ಆರೋಗ್ಯ ಸುಧಾರಣೆ ಆಗಿದೆ ಎಂಬ ನಂಬಿಕೆಯಿಂದ ಹಿಂದೂ ಧರ್ಮ ತ್ಯಜಿಸಿ ಕುಟುಂಬ ಸಮೇತವಾಗಿ ಕ್ರಿಶ್ಚಿಯನ್ ಧರ್ಮ ಸ್ವೀಕಾರ ಮಾಡಿದ್ದ.

ಕಳೆದ ಒಂದು ವರ್ಷದಿಂದ ಹಿಂದೂ ಧರ್ಮವನ್ನು ಬಿಡಬಾರದಿತ್ತು ಎಂದೆನಿಸಲು ಶುರುವಾಗಿದೆ. ಇದರ ಜತೆ ಹಿಂದೂ ಧರ್ಮವನ್ನು ಬಿಟ್ಟು ಹೋಗಿದ್ದಕ್ಕೆ ನಿತ್ಯ ಕನಸಲ್ಲಿ ಆಂಜನೇಯ ಸ್ವಾಮಿ ಬರುತ್ತಿದ್ದನಂತೆ. ಇದರ ಜತೆ ಮನೆಯಲ್ಲಿ ಯಾವುದೂ ಕೂಡ ಸರಿಯಾಗಿ ನಡೆಯುತ್ತಿರಲಿಲ್ವಂತೆ. ಮನೆಯಲ್ಲಿ ನಯಾ ಪೈಸೆ ಉಳಿಯುತ್ತಿರಲಿಲ್ವಂತೆ. ಹೀಗಾಗಿ ಹೇಗಾದ್ರು ಮಾಡಿ ವಾಪಸ್ ಹಿಂದೂ ಧರ್ಮಕ್ಕೆ ಬರಬೇಕು ಎಂದು ವೆಂಕಟೇಶ್ ಕುಟುಂಬಕ್ಕೆ ಎನಿಸಿದೆ.

ಘರ್ ವಾಪಸಿ ಮಾಡಲು ಅಲೆ‌ಮಾರಿ ಬುಡುಗ ಜಂಗಮ ಸಮುದಾಯದ ಮುಖಂಡರ ಮುಂದೆ ಆಗಿರುವ ಕಷ್ಟವನ್ನು ವೆಂಕಟೇಶ್ ಹೇಳಿಕೊಂಡಿದ್ದಾರೆ. ಹೀಗಾಗಿ ಸಮುದಾಯದ ಮುಖಂಡರು ಭಜರಂಗದಳದ ಮುಖಂಡರು ಹಾಗೂ ಸಮುದಾಯದ ಸಾಯಿಬಾಬಾ ಸ್ವಾಮಿ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಸ್ವಾಮಿಜಿ ದಂಪತಿ ಹಾಗೂ ಮಕ್ಕಳ‌ ಹಣೆಗೆ ವಿಭೂತಿ ಹಚ್ಚಿ ಕೊರಳಿಗೆ ರುದ್ರಾಕ್ಷಿ ಧಾರಣೆ ಮಾಡಿ ಧರ್ಮಕ್ಕೆ ಸ್ವೀಕಾರ ಮಾಡಿದ್ದಾರೆ.

Actress Rachita Ram ನನ್ನ ಬಗ್ಗೆ ಹೇಳಿದ ಮಾತುಗಳಿಂದ ಬಹಳ ಬೇಜಾರಾಗಿದೆ -ನಟಿ ರಚಿತಾ ರಾಮ್

TAGGED:Christian family returns to Hinduism after 4 years
Share This Article
Facebook Twitter Copy Link Print
Previous Article ಪಾಕಿಸ್ತಾನಿ ನಟಿ ಆಯೇಷಾ ಖಾನ್ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆ
Next Article Paris Diamond League ಮೊದಲ ಡೈಮಂಡ್ ಲೀಗ್ ಪ್ರಶಸ್ತಿಯನ್ನು ಗೆದ್ದ ನೀರಜ್ ಚೋಪ್ರಾ!

Popular Posts

Voter ID ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ವೋಟರ್ ಐಡಿ ಕಡ್ಡಾಯ ಎಂದ ಸಿಎಂ ಡಿಕೆ

2 Min Read

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು?

2 Min Read

Rain shortage ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಶೇ.21 ಕೊರತೆ!

2 Min Read

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read
ಪ್ರಮುಖದೇಶಮನರಂಜನೆ

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read
ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?