newsics.com
ಸಾವಿರಾರು ಕೋಟಿ ಪಿಎನ್‌ಬಿ ಸಾಲ ಪಡೆದು ಲಂಡನ್‌ಗೆ ಪಲಾಯನ ಮಾಡಿದ ಮಾಜಿ ಉದ್ಯಮಿ ವಿಜಯ್ ಮಲ್ಯ ಆಗಾಗ್ಗೆ ಸುದ್ದಿಯಾಗುತ್ತಾರೆ.ದೇಶ-ವಿದೇಶಗಳಲ್ಲೇ ಇದ್ರೂ ಪೂಜಿಸೋದು ಬಿಡೋದಿಲ್ಲ.
ಇದೀಗ ಈ ಸಂದರ್ಶನವೊಂದರಲ್ಲಿ ನಾನು ಯಾವುದೇ ಕಷ್ಟಗಳನ್ನು ಎದುರಿಸಿದರೂ, ಅವನು ಕೊನೆಯಲ್ಲಿ ನನ್ನನ್ನು ರಕ್ಷಿಸುತ್ತಾನೆ, ನಾನು ದೇವರನ್ನ ನಂಬುತ್ತೇನೆ, ದೇವರೇ ನನ್ನನ್ನು ಕಷ್ಟಗಳಿಂದ ರಕ್ಷಿಸುತ್ತಾನೆ ಎಂದು ವಿಜಯ್ ಮಲ್ಯ ಹೇಳಿದ್ರು. ದೇವರೇ ನನ್ನನ್ನು ಕಾಪಾಡ್ತಾನೆ ಎಂಬ ಮಲ್ಯ ಮಾತು ಇದೀಗ ಫುಲ್ ವೈರಲ್ ಆಗ್ತಿದೆ..
ದೇವರ ಬಗ್ಗೆ ಮಾತಾಡಿದ ವಿಜಯ ಮಲ್ಯ, ದಕ್ಷಿಣ ಭಾರತದ ಅನೇಕ ದೇವಾಲಯಗಳಿಗೆ ಚಿನ್ನವನ್ನೇ ಕೊಡುಗೆ ಕೊಟ್ಟ ಬಗ್ಗೆ ವಿವರಿಸಿದ್ರು. ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯದ ಸಂಪೂರ್ಣ ಛಾವಣಿಯನ್ನು ಚಿನ್ನದಿಂದ ಲೇಪಿಸಲು ನಾನು ಚಿನ್ನವನ್ನು ದಾನ ಮಾಡಿದ್ದೇನೆ. ತಿರುಮಲ ತಿರುಪತಿ ದೇವಾಲಯದ ಗರ್ಭಗುಡಿಯ ಮುಂಭಾಗವನ್ನು ಸಹ ಚಿನ್ನದಿಂದ ಲೇಪಿಸಿದ್ದೇನೆ. ಮುಕಾಂಬಿಕಾ ಮತ್ತು ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳಿಗೆ ಧ್ವಜಸ್ತಂಭಗಳನ್ನು ಸಹ ನೀಡಿದ್ದೇನೆ. ನನಗೆ ದೇವರ ಮೇಲೆ ನಂಬಿಕೆ ಇದೆ ಎಂದು ಮಲ್ಯ ಹೇಳಿದ್ದಾರೆ
https://www.instagram.com/reel/DKmSLglpYIU/?igsh=MTg4ZWtxanV0dDkxZA==