newsics.com
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರಕ್ಕೆ ಇಂದಿಗೆ 11 ವರ್ಷ ಪೂರೈಸಿದೆ.ಮೋದಿ ಸರ್ಕಾರ ಸಾಧನೆಗಳ ಬಗ್ಗೆ ಇಂದು ಬಿಜೆಪಿಯಿಂದ ಸುದ್ದಿಗೋಷ್ಠಿ ನಡೆಸಲಾಗುವುದು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಾಯಕರು ಸುದ್ದಿಗೋಷ್ಠಿ ನಡೆಸಲಿದ್ದು, ಮೋದಿ ಸರ್ಕಾರದ ಮೂರನೇ ಅವಧಿಯ ಸಾಧನೆಗಳ ಬಗ್ಗೆ ಮಾಹಿತಿ ಕೊಳ್ಳಲಿದ್ದಾರೆ.
2024ರ ಲೋಕಸಭೆ ಚುನಾವಣೆ ಜಿದ್ದಾಜಿದ್ದಿನ ಕಣವಾಗಿತ್ತು. ಒಂದೆಡೆ ಬಿಜೆಪಿ ನೇತೃತ್ವದ ಎನ್ಡಿಎ ಕೂಟವಾದರೆ , ಮತ್ತೊಂದೆಡೆ ಕಾಂಗ್ರೆಸ್ ನೇತೃತ್ವದಲ್ಲಿ ಹಲವು ವಿಪಕ್ಷಗಳನ್ನೊಳಗೊಂಡು ಇಂಡಿಯಾ ಮಹಾ ಮೈತ್ರಿ ರಚನೆಯಾಗಿತ್ತು. ಈ ಬಿಗು ಪೈಪೋಟಿಯಲ್ಲಿ ಇಂಡಿಯಾ 234 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರೆ, ಎನ್ಡಿಎ ಕೂಟ 292ರಲ್ಲಿ ಗೆದ್ದು ಅಧಿಕಾರಕ್ಕೇರಿತ್ತು.
2014, 2019ರಲ್ಲಿ ಐತಿಹಾಸಿ ಗೆಲುವು ಸಾಧಿಸಿದ್ದ ಬಿಜೆಪಿ 2024ರಲ್ಲಿ ಗೆದ್ದು ಬೀಗಿತ್ತು. ಸತತವಾಗಿ ಮೂರನೇಯ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದ್ದಾರೆ.