newsics.com
ಮಹಿಳೆಯೊಬ್ಬರು ಮದುವೆಯಾಗದೇ ಇದ್ದರೆ ಏನೆಲ್ಲಾ ಲಾಭಗಳಿವೆ, ಮದುವೆಯಾದರೆ ಏನೆಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗಬೇಕೆಂದು ಎಂದು ವಿವರಿಸಿ ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗಿದ್ದು, ಆನ್ಲೈನ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ.
Asksindianwomen ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಮಹಿಳೆಯೊಬ್ಬರು ಪೋಸ್ಟ್ ಮಾಡಿದ್ದು, ಅವಿವಾಹಿತ ಮಹಿಳೆಯರ ಪ್ರಯೋಜನಗಳನ್ನು ಪಟ್ಟಿ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ, ನಾನು ಸಂಪಾದಿಸುತ್ತಿದ್ದೇನೆ ಎಂದು ಭಾವಿಸೋಣ. ನಾನು ಅವಿವಾಹಿತಳಾಗಿ ಇದ್ದರೆ ನನ್ನ ತಾಯಿ ಮಾಡಿದ ಒಂದು ಕಪ್ ಕಾಫಿಯೊಂದಿಗೆ ನನ್ನ ದಿನ ಆರಂಭವಾಗುತ್ತದೆ. ತಿಂಡಿ ತಿಂದು ರೆಡಿಯಾಗುತ್ತೇನೆ. ದಿನವಿಡೀ ಆಫೀಸಿನ ಕೆಲಸ ಮಾಡಿ ನಂತರದಲ್ಲಿ ವಿಶ್ರಾಂತಿ ಪಡೆಯುತ್ತೇನೆ. ಮದುವೆಯಾದರೆ ಅಡುಗೆ, ಬಟ್ಟೆ ತೊಳೆಯುವುದು ಎಲ್ಲಾ ಹೊರೆಯೂ ತಲೆ ಮೇಲೆ ಬೀಳುತ್ತದೆ. ತನಗಾಗಿ ಮಾತ್ರ ತನ್ನ ಕುಟುಂಬದವರ ಕೆಲಸವನ್ನು ನಾನೇ ಮಾಡಬೇಕಾಗುತ್ತದೆ.
ಒಂದು ವೇಳೆ ನೀವೇನಾದ್ರೂ ಸಂಪಾದಿಸುತ್ತೀರಿ ಅಂತಾದ್ರೆ ಮನೆ ಕೆಲಸದಾಕೆಯನ್ನು ನೇಮಿಸಿಕೊಳ್ಳಬಹುದು. ಅದು ನನ್ನ ಸಂಬಳದಿಂದಲೂ ಸಾಧ್ಯವಿದೆ. ಮದುವೆಯಾದ್ರೆ ಹುಡುಗನ ಕುಟುಂಬವು ನನ್ನನ್ನು ಮನೆ ಕೆಲಸಕ್ಕಾಗಿ ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ. ನಾನು ಮಾಡುವ ಕೆಲಸಕ್ಕೆ ಯಾವುದೇ ಸಂಬಳವಿರುವುದಿಲ್ಲ. ನನ್ನನ್ನು ಯಾವುದೇ ಸಂಬಳವಿಲ್ಲದೇ ಸೇವಕಿಯಾಗಿ ನೇಮಿಸಿಕೊಳ್ಳಲಾಗುತ್ತದೆ. ಇದರಿಂದ ನನಗೇನು ಪ್ರಯೋಜನ ಎಂದು ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ.

ಈ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದು ಈ ಮಹಿಳೆಯ ಮಾತನ್ನು ಒಪ್ಪಿಕೊಂಡಿದ್ದಾರೆ.
ಬಳಕೆದಾರರೊಬ್ಬರು, ನೀವು ಹೇಳುವುದು ಸರಿಯೇ. ಆದರೆ ನಿಮ್ಮೆಲ್ಲ ಮಾತನ್ನು ನಿಮ್ಮ ಹೆತ್ತವರು ಒಪ್ಪಬೇಕಲ್ಲವೇ ಎಂದಿದ್ದಾರೆ.
ಮತ್ತೊಬ್ಬರು, ಮದುವೆಯಾದ ಬಳಿಕ ನೀವು ನಿಮ್ಮ ಸಂಗಾತಿಯೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸ ಮಾಡಿ. ಇಬ್ಬರೂ ಉದ್ಯೋಗದಲ್ಲಿರುತ್ತೀರಿ. ಮನೆ ಕೆಲಸವನ್ನು ಇಬ್ಬರೂ ಸಮಾನವಾಗಿ ಹಂಚಿಕೊಳ್ಳಿ, ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಉತ್ತರ ಸಿಕ್ಕಿದಂತೆ ಆಯಿತು ಅಂದುಕೊಂಡಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, ನೀವು, ನಿಮ್ಮ ಸಂಗಾತಿ ಹಾಗೂ ಆ ವ್ಯಕ್ತಿಯ ಕುಟುಂಬದವರು ಹೇಗೆ ಎನ್ನುವುದರ ಮೇಲೆ ನಿಂತಿರುತ್ತದೆ ಎಂದಿದ್ದಾರೆ. ಇನ್ನೋರ್ವ ಬಳಕೆದಾರರು, ಲೆಕ್ಕಾಚಾರವಿರಬೇಕು, ಆದರೆ ಯಾವುದು ಕೂಡ ಅತಿಯಾಗಬಾರದು ಎಂದಿದ್ದಾರೆ.
Viral Video: ಅನೈತಿಕ ಸಂಬಂಧ ಹೊಂದಿದ್ದ ಜೋಡಿಯನ್ನು ಶುದ್ಧೀಕರಿಸಿದ ಸ್ಥಳೀಯರು: ವೈರಲ್ ವಿಡಿಯೋ ನೋಡಿ
ಎಲೆಕ್ಟ್ರಿಕ್ ಟೂತ್‌ಬ್ರಷ್ ಮೂಲಕ ಪತಿ ಅಕ್ರಮ ಸಂಬಂಧ ಬಯಲು ಮಾಡಿದ ಪತ್ನಿ
Actress Vaishnavi Gowda ನಟಿ ವೈಷ್ಣವಿ ಗೌಡ ಮನೆಯಲ್ಲಿ ಮದುವೆ ಸಂಭ್ರಮ; ಅರಿಶಿಣ ಶಾಸ್ತ್ರದ ಫೋಟೋಗಳು ವೈರಲ್