newsics.com
ನವದೆಹಲಿ: ಜೈಪುರ್-ದೆಹಲಿ ನಡುವಿನ ಇಂಡಿಗೋ ವಿಮಾನ ಟರ್ಬುಲೆನ್ಸ್ ಹೊಡೆತಕ್ಕೆ ಸಿಲುಕಿ ನಿಯಂತ್ರಣ ಕಳೆದುಕೊಂಡ ಘಟನೆ ನಡೆದಿದೆ.
ಪ್ರಯಾಣಿಕರನ್ನು ಹೊತ್ತು ಸಾಗಿದ ಇಂಡಿಗೋ ವಿಮಾನ 6E 6313 ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಅನ್ನುಷ್ಟರಲ್ಲೇ ಟರ್ಬುಲೆನ್ಸ್ಗೆ ಸಿಲುಕಿದೆ.
ಭಾರಿ ಪ್ರಮಾಣದ ಗಾಳಿ ಮಳೆಯಿಂದ ವಿಮಾನ ಲ್ಯಾಡಿಂಗ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ವಿಮಾನ ನಿಯಂತ್ರಕ್ಕೆ ಸಿಗದೆ ತೇಲಾಡಿದೆ. ಇತ್ತ ಪ್ರಯಾಣಿಕರು ತೀವ್ರ ಆತಂಕದ ಪರಿಸ್ಥಿತಿ ಎದುರಿಸಿದ್ದಾರೆ. ಪ್ರಯಾಣಿಕರು ಚೀರಾಡುತ್ತಿರುವ ದೃಶ್ಯ, ಪ್ರಾರ್ಥಿಸುತ್ತಿರುವ ದೃಶ್ಯ ಸೆರೆಯಾಗಿದೆ.
ವರದಿಗಳ ಪ್ರಕಾರ, ದೆಹಲಿ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದ 6E 6313 ವಿಮಾನವು ಗಂಟೆಗೆ 80 ಕಿ.ಮೀ ವೇಗದಲ್ಲಿ ಬೀಸುತ್ತಿದ್ದ ಬಲವಾದ ಗಾಳಿಗೆ ಸಿಲುಕಿಕೊಂಡಿದೆ.
ಗಾಳಿಯಲ್ಲಿ ಹಲವು ಸುತ್ತುಗಳನ್ನು ಸುತ್ತಿದ ನಂತರ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಆ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 80 ಕಿ.ಮೀ.ವರೆಗೆ ಇತ್ತು ಎಂದು ಪೈಲಟ್ ಹೇಳಿದ್ದಾರೆ. ಮತ್ತು ಪೈಲಟ್ ವಿಮಾನದ ಸಮೀಪಿಸುವಿಕೆಯನ್ನು ನಿಲ್ಲಿಸಿ ಹವಾಮಾನವು ನಿಯಂತ್ರಣಕ್ಕೆ ಬರುವವರೆಗೆ ಮತ್ತೆ ಮೇಲೆ ಹಾರಿಸಲಾಯ್ತು ಎಂದಿದ್ದಾರೆ.
ವಿಮಾನವು ಗಾಳಿಯಲ್ಲಿ ಹಲವು ಸುತ್ತುಗಳನ್ನು ಸುತ್ತುವಾಗ ವಿಮಾನದಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಕ್ಯಾಬಿನ್ನೊಳಗಿನ ವಸ್ತುಗಳು ತೀವ್ರವಾಗಿ ಅಲುಗಾಡುತ್ತಿದ್ದಾಗ, ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣದ ಮಧ್ಯಭಾಗದಲ್ಲಿ ಕೂತು ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಗಾಳಿಯ ವೇಗ ತುಂಬಾ ಹೆಚ್ಚಾಗಿದ್ದು, ವಿಮಾನ ಸಮೀಪಿಸುವುದನ್ನು ನಿಲ್ಲಿಸುತ್ತಿರುವ ಪೈಲಟ್ನ ಘೋಷಣೆಯನ್ನು ಸಹ ಇಲ್ಲಿ ನೋಡಬಹುದಾಗಿದೆ. ಪೈಲಟ್ ತಮ್ಮ ಧ್ವನಿಯಲ್ಲಿ ಪ್ರಯಾಣಿಕರಿಗೆ ಧೈರ್ಯ ತುಂಬುತ್ತಿರುವುದನ್ನು ಕಾಣಬಹುದು.
ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ