newsics.com
ಬೆಂಗಳೂರು: ಜೂನ್.1ರ ಇಂದು ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ಕರ್ನಾಟಕ ಸಹಕಾರ ಹಾಲು ಮಹಾಮಂಡಳ 18 ವಿವಿಧ ಮಾದರಿ ನಂದಿನಿ ಕೇಕ್ ಹಾಗೂ ಮಫಿನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.
ಈಗ ಇನ್ನೂ 18 ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತಿದೆ. ಇಂದಿನಿಂದಲೇ ಮಾರುಕಟ್ಟೆಯಲ್ಲಿ ದೊರೆಯುವ ನಂದಿನಿ ಕೇಕ್ ಮತ್ತು ಮಫಿನ್‌ಗಳು ಖಾಸಗಿ ಬ್ರಾಂಡ್‌ನ ಕೇಕ್ ಮತ್ತು ಮಫಿನ್‌ಗಳಿಗಿಂತ ಅತ್ಯುತ್ತಮ ಗುಣಮಟ್ಟದಲ್ಲಿ ಮತ್ತು ಸ್ಪರ್ಧಾತ್ಮಕ ಬೆಲೆಗಳಲ್ಲಿ ಲಭ್ಯವಿರಲಿವೆ.
ಸ್ಪಾಂಜಿ ವೆನಿಲ್ಲಾ ಕೇಕ್ 25 ಗ್ರಾಂ ಗೆ ರೂ.10/-, ಫ್ರೂಟಿ ಸ್ಲೈಸ್ ಕೇಕ್ 30 ಗ್ರಾಂ ಗೆ ರೂ.1/-5, ಚಾಕೋ ಕಿತ್ತಲೆ ಸ್ಲೈಸ್ ಕೇಕ್, ವೆನಿಲ್ಲಾ ಸ್ಲೈಸ್ ಕೇಕ್, ಅನಾನಸ್ ಸ್ಲೈಸ್ ಕೇಕ್ 50 ಗ್ರಾಂ ಗೆ ರೂ.15/- ರಿಂದ 20/-, ವೆನಿಲ್ಲಾ ಮಫಿನ್, ಚಾಕಲೇಟ್ ಮಫಿನ್, ಅನಾನಸ್ ಮಫಿನ್, ಸ್ಟ್ರಾಬೆರಿ ಮಫಿನ್, ಮಾವಾ ಮಫಿನ್ 150 ಗ್ರಾಂ ಗೆ ರೂ.50/-, ಪ್ಲಮ್ ಕೇಕ್, ಚಾಕೋ ವೆನಿಲ್ಲಾ ಕೇಕ್ , ಫ್ರೂಟ್ ಕೇಕ್, ವೆನಿಲ್ಲಾ ಕೇಕ್, ಚಾಕೊಲೇಟ್ ಕೇಕ್, ವಾಲ್ನಟ್ ಬನಾನಾ ಕೇಕ್, ಚಾಕಲೆಟ್ ಬೆಲ್ಲದ ಕೇಕ್ ಹಾಗೂ ಕೊಬ್ಬರಿ ಬೆಲ್ಲದ ಕೇಕ್ 200 ಗ್ರಾಂ ಗೆ ರೂ.110/- ದರವನ್ನು ನಿಗದಿಪಡಿಸಲಾಗಿದೆ.
ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ಸಿಹಿ ಹಾಗೂ ಖಾರಾ ಉತ್ಪನ್ನಗಳು ನಂದಿನಿ ಆಳ್ವಾ ಅಲ್ಲದೇ ಬ್ರೇಡ್, ಬನ್, ಐಸ್ ಕ್ರೀಂ ಸೇರಿದಂತೆ ಈಗಾಗಲೇ 150 ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ಕೆ.ಎಂ.ಎಫ್ ಹಾಗೂ ಹಾಲು ಒಕ್ಕೂಟಗಳಿಂದ ಮಾರಾಟ ಮಾಡಲಾಗುತ್ತಿದೆ