newsics.com
ಉತ್ತರ ಪ್ರದೇಶ: ಪಾರ್ಕಿಂಗ್ ಸ್ಥಳದ ವಿಚಾರಕ್ಕೆ ನಡೆದ ವಾಗ್ವಾದದಲ್ಲಿ ಫ್ಲಾಟ್ ಮಾಲೀಕನೊಬ್ಬ ನೆರೆಮನೆಯ ವ್ಯಕ್ತಿಯ ಮೂಗನ್ನು ಕಚ್ಚಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಈ ದೃಶ್ಯ ಅಪಾರ್ಟ್‌ಮೆಂಟ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನರಮಾವೊದ ರತನ್ ಪ್ಲಾನೆಟ್ ಅಪಾರ್ಟ್‌ಮೆಂಟ್ಸ್‌ನ ಕಾರ್ಯದರ್ಶಿ ನಿವೃತ್ತ ಎಂಜಿನಿಯರ್ ರೂಪೇಂದ್ರ ಸಿಂಗ್ ಯಾದವ್ ಅವರಿಗೆ ಭಾನುವಾರ ಸಂಜೆ ನಿವಾಸಿ ಕ್ಷಿತಿಜ್ ಮಿಶ್ರಾ ಕರೆ ಮಾಡಿದ್ದಾರೆ. ಮತ್ತೊಬ್ಬ ನಿವಾಸಿಯ ಕಾರು ತನ್ನ ನಿಗದಿತ ಸ್ಥಳದಲ್ಲಿ ನಿಂತಿದೆ ಎಂದು ಮಿಶ್ರಾ ದೂರಿದ್ದಾರೆ. ಸಮಸ್ಯೆಯನ್ನು ಪರಿಹರಿಸಲು ಯಾದವ್ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಆದರೆ ಮಿಶ್ರಾ ಯಾದವ್ ಅವರನ್ನು ಕೆಳಗಿಳಿಯುವಂತೆ ಒತ್ತಾಯಿಸಿದರು.
ಆಗಮಿಸಿದ ಮಿಶ್ರಾ, ಯಾದವ್ ಅವರನ್ನು ಕಪಾಳಮೋಕ್ಷ ಮಾಡಿ ನಂತರ ಇದ್ದಕ್ಕಿದ್ದಂತೆ ಅವರ ಮೂಗಿನ ಭಾಗವನ್ನು ಕಚ್ಚಿದರು. ಪಾರ್ಕಿಂಗ್ ಸ್ಥಳದಲ್ಲಿ ಯಾದವ್ ಕುಸಿದು ಬಿದ್ದು, ತೀವ್ರ ರಕ್ತಸ್ರಾವವಾಯಿತು. ಇಡೀ ಘಟನೆ ಸೊಸೈಟಿಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.