newsics.com
ಮುಂಬೈ: ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಸೀಮೆ ಹಸುವೊಂದು ಕಟ್ಟಡದ 3ನೇ ಮಹಡಿಗೆ ಹತ್ತಿರುವಂತಹ ಘಟನೆ ಮಹಾರಾಷ್ಟ್ರದ ಪುಣೆಯ ಪರದೇಶಿ ವಾಡಾದ ರವಿವಾರ್ ಪೇಠ್ ಪ್ರದೇಶದಲ್ಲಿ ನಡೆದಿದೆ.
ಹಸುವೊಂದು ಸುತ್ತಾಡಿ ಮೇಯಿತ್ತಿತ್ತು. ಈ ವೇಳೆ ಬೀದಿ ನಾಯಿಗಳು ಒಟ್ಟಿಗೆ ಸೇರಿ ಹಸು ಹಿಂದೆ ಬಿದ್ದಿವೆ. ಈ ನಾಯಿಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹಸು ಓಡೋಡಿ ಹೋಗಿದೆ. ಆದರೆ ಹಸು ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರು ನಾಯಿಗಳು ಬಿಟ್ಟಿಲ್ಲ.
ಹೀಗಾಗಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಕಟ್ಟಡದ 3ನೇ ಮಹಡಿವರೆಗೆ ಹಸು ಏರಿದೆ. ಕಟ್ಟಡಕ್ಕೆ ಮರದ ಮೆಟ್ಟಿಲುಗಳು ಇರುವುದರಿಂದ ಹಸು ಬೇಗನೆ ಮೇಲೆ ಹೋಗಿದೆ. ಆದರೆ ಕೆಳಗೆ ಬರುವುದು ಗೊತ್ತಾಗಿಲ್ಲ. ಇನ್ನು ಕಟ್ಟಡದಲ್ಲಿದ್ದ ನಿವಾಸಿಗಳು ಇದರಿಂದ ಸಮಸ್ಯೆ ಸಿಲುಕಿದ್ದರು. ಕೊನೆಗೆ ಸ್ಥಳೀಯರು ಕ್ರೇನ್ ಯಂತ್ರವನ್ನು ತರಿಸಿ ಹಸುಗೆ ಹಗ್ಗಗಳಿಂದ ಬಿಗಿದು ಕಟ್ಟಿ, ಕೆಳಗೆ ಇಳಿಸಿದ್ದಾರೆ.