newsics.com
ಬೆಂಗಳೂರು: ವ್ಯಕ್ತಿಯೊಬ್ಬರು ಸೊಳ್ಳೆ ಕೊಲ್ಲಲು ಹೋಗಿ ತನ್ನ ಎರಡು ಲಕ್ಷ ರೂಪಾಯಿ ಬೆಲೆಬಾಳೋ ಸ್ಮಾರ್ಟ್ ಟಿವಿಯೇ ಹಾಳು ಮಾಡ್ಕೊಂಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮಳೆಗಾಲ ಶುರುವಾಗುತ್ತಿದ್ದಂತೆ ಸೊಳ್ಳೆಗಳ ಕಾಟ ಸಹ ಹೆಚ್ಚಾಗುತ್ತದೆ. ಸೊಳ್ಳೆ ನಿವಾರಣೆಗಾಗಿ ವಿದ್ಯುತ್ ಚಾಲಿತ ಬ್ಯಾಟ್‌ಗಳನ್ನು ಬಳಸಲಾಗುತ್ತದೆ. ಈ ಬ್ಯಾಟ್‌ನ ತಂತಿಗಳ ಮೇಲೆ ಸೊಳ್ಳೆ ಕುಳಿತರೆ ವಿದ್ಯುತ್ ಶಾಕ್‌ನಿಂದ ಅದು ಸಾಯುತ್ತದೆ. ಹಾಗೆಯೇ ಇಲ್ಲೊಬ್ಬ ಟಿವಿ ಮೇಲೆ ಕುಳಿತ ಸೊಳ್ಳೆಯನ್ನು ಹೊಡೆಯೋಕೆ ಹೋಗಿ ತನ್ನ ಎರಡು ಲಕ್ಷ ರೂಪಾಯಿ ಬೆಲೆಬಾಳೋ ಸ್ಮಾರ್ಟ್ ಟಿವಿನೇ ಹಾಳು ಮಾಡ್ಕೊಂಡಿದ್ದಾನೆ.ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.
ಬಾಲಕನೋರ್ವ ಟಿವಿ ನೋಡುತ್ತಾ ಕುಳಿತಿರುತ್ತಾನೆ. ಓರ್ವ ವ್ಯಕ್ತಿ ಕೈಯಲ್ಲಿ ವಿದ್ಯುತ್ ಚಾಲಿತ ಮಸ್ಕಿಟೋ ಬ್ಯಾಟ್ ಹಿಡಿದುಕೊಂಡು ಸೊಳ್ಳೆಯನ್ನು ಕೊಲ್ಲಲು ಪ್ರಯತ್ನಿಸುತ್ತಿರೋದನ್ನು ಕಾಣಬಹುದು. ಸೊಳ್ಳೆ ಟಿವಿ ಸ್ಕ್ರೀನ್ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ಮಸ್ಕಿಟೋ ಬ್ಯಾಟ್‌ನಿಂದ ಬಾರಿಸುತ್ತಾನೆ. ಸೊಳ್ಳೆ ಸತ್ತಿದೆಯೋ ಗೊತ್ತಿಲ್ಲ, ಜೋರಾಗಿ ಬ್ಯಾಟ್‌ನಿಂದ ಹೊಡೆದಿದ್ದರಿಂದ ಟಿವಿ ಸ್ಕ್ರೀನ್ ಮೇಲೆ ಗ್ರೀನ್ ಲೈನ್ ಕಾಣಿಸಿಕೊಂಡು ಡಿಸ್‌ಪ್ಲೇ ಡ್ಯಾಮೇಜ್ ಆಗಿದೆ.
ಈ ವಿಡಿಯೋವನ್ನು bhala_studios ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ 13 ಸಾವಿರಕ್ಕೂ ಅಧಿಕ ಲೈಕ್ಸ್, ನೂರಾರು ಕಮೆಂಟ್‌ಗಳು ಬಂದಿವೆ.
https://www.instagram.com/reel/DJl-9lUOkUs/?igsh=MThzeWV5NHRhMXZqcQ==