newsics.com
ಮಲಗುವ ಕೋಣೆಯಲ್ಲಿ ಬಳಸುವ ಬೆಡ್ಶೀಟ್ ಗಳನ್ನು ತಿಂಗಳುಗಟ್ಟಲೆ ಬದಲಾಯಿಸದೆ ಬಳಸುವ ಅನೇಕರಿದ್ದಾರೆ. ಆದರೆ ಈ ರೀತಿಯ ಅಭ್ಯಾಸ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಇದು ಚಿಕ್ಕ ವಿಷಯ ಎನಿಸಿದರೂ ಕೂಡ ಇದರಿಂದ ಉಂಟಾಗುವ ತೊಂದರೆಗಳು ಸಾಕಷ್ಟಿದೆ.
ಸಾಮಾನ್ಯವಾಗಿ ನಾವು ಮಲಗುವ ಕೋಣೆ ಸ್ವಚ್ಛವಾಗಿ ಮತ್ತು ಸುಂದರವಾಗಿ ಇದ್ದರೆ ನಿದ್ರೆ ಚೆನ್ನಾಗಿ ಬರುವುದರ ಜೊತೆಗೆ ನಮ್ಮ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ. ಆದರೆ ತಿಂಗಳುಗಟ್ಟಲೇ ಹಾಸಿಗೆಯ ಮೇಲೆ ಹಾಸಿರುವಂತಹ ಬೆಡ್ಶೀಟ್ ಧೂಳು, ಬೆವರು, ಲಾಲಾರಸ, ತಲೆಹೊಟ್ಟು ಮತ್ತು ದೇಹದ ಸತ್ತ ಚರ್ಮಗಳೆಲ್ಲಾ ಬೆಡ್ಶೀಟ್ಗೆ ಅಂಟಿಕೊಂಡಿರುತ್ತದೆ. ಇದು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಜೀವನದ ಮೂರನೇ ಒಂದು ಭಾಗವನ್ನು ನಾವು ಹಾಸಿಗೆಯಲ್ಲಿ ಕಳೆಯುವುದರಿಂದ ಇವುಗಳನ್ನು ಕೊಳೆಯಾಗುವುದಕ್ಕಿಂತ ಮುಂಚೆಯೇ ಬಿಸಿ ನೀರಿನಲ್ಲಿ ತೊಳೆಯಬೇಕು. ಸಂಶೋಧನೆಗಳು ಹೇಳುವ ಪ್ರಕಾರ, ಕೊಳಕು ಬೆಡ್ ಶೀಟ್ಗಳು ಟಾಯ್ಲೆಟ್ ಸೀಟ್ಗಳಿಗಿಂತ ಹೆಚ್ಚು ಬ್ಯಾಕ್ಟೀರಿಯಗಳನ್ನು ಹೊಂದಿರುತ್ತವೆ. ಹಾಗಾಗಿ ಬೆಡ್ ಶೀಟ್ಗಳನ್ನು ವಾರಕ್ಕೆ ಒಮ್ಮೆಯಾದರೂ ತೊಳೆಯಬೇಕು ಇಲ್ಲವಾದಲ್ಲಿ ಕೊಳಲು ಬೆಡ್ಶೀಟ್ ಗಳಿಂದ ಮೊಡವೆಗಳು, ಅಲರ್ಜಿ ಅಥವಾ ಸೋಂಕುಗಳಿಗೆ ಕಾರಣವಾಗಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಧೂಳಿನ ಕಣಗಳು ಗಾಳಿಯೊಂದಿಗೆ ಬೆರೆತು ಅಸ್ತಮಾ ಅಥವಾ ಉಸಿರಾಟದ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ರಾತ್ರಿಯಿಡೀ ಈ ಕೊಳಕು ಹಾಸಿಗೆಗಳ ಮೇಲೆ ಮಲಗುವುದರಿಂದ ದೇಹವು ಈ ಹಾನಿಕಾರಕ ಸೂಕ್ಷ್ಮಜೀವಿಗಳಿಗೆ ಒಡ್ಡಿಕೊಳ್ಳುತ್ತದೆ, ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.
ಕೊಳಲು ಬೆಡ್ಶೀಟ್ ನಿದ್ರೆಗೆ ಭಂಗ ತರುತ್ತದೆ
ಮಲಗುವ ಕೋಣೆಯ ಬೆಡ್ ಶೀಟ್ಗಳು ಕೊಳಕಾಗಿದ್ದರೆ ಇದು ನಿಮ್ಮ ನಿದ್ರೆಯ ಗುಣಮಟ್ಟವನ್ನು ಕುಂಠಿತಗೊಳಿಸುತ್ತವೆ. ಬೆವರು ಮತ್ತು ಎಣ್ಣೆಯ ವಾಸನೆ ಮನಸ್ಸಿನ ಶಾಂತಿಯನ್ನು ಹಾಳು ಮಾಡುತ್ತದೆ ಜೊತೆಗೆ ನಿದ್ರಾಹೀನತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದೇ ಸ್ವಚ್ಛವಾಗಿರುವ ಬೆಡ್ ಶೀಟ್ಗಳು ನಿದ್ರೆ ಚೆನ್ನಾಗಿ ಬರಲು ಸಹಾಯ ಮಾಡುತ್ತದೆ. ಜೊತೆಗೆ ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ನಿಮಗೆ ಅಲರ್ಜಿ ಇದ್ದರೆ, ಬೆಡ್ ಶೀಟ್ಗಳನ್ನು ನಿಯಮಿತವಾಗಿ ಬದಲಾಯಿಸಬೇಕು. ಇಲ್ಲವಾದಲ್ಲಿ ಇದು ನಿಮ್ಮ ಅನಾರೋಗ್ಯವನ್ನು ಉಲ್ಬಣಗೊಳಿಸುತ್ತದೆ. ಅಲ್ಲದೆ ಸೀನು, ಜ್ವರ ಮತ್ತು ಉಸಿರಾಟದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಕಾಲಕಾಲಕ್ಕೆ ನಿಮ್ಮ ಬೆಡ್ ಶೀಟ್ಗಳನ್ನು ತೊಳೆಯಬೇಕು. ಅದರಲ್ಲಿಯೂ ನಿಮ್ಮ ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಹಾಸಿಗೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಇಲ್ಲವಾದರೆ ನಾನಾ ರೀತಿಯ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.
ಕೊಳಕು ಬೆಡ್ಶೀಟ್ ಗೊನೊರಿಯಾಕ್ಕೆ ಕಾರಣವಾಗುತ್ತೆ
ಗೊನೊರಿಯಾವು ಲೈಂಗಿಕವಾಗಿ ಹರಡುವ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕಾಗಿದ್ದು ಇದು ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಸೋಂಕು ತರುತ್ತದೆ. ಗೊನೊರಿಯಾ ಹೆಚ್ಚಾಗಿ ಮೂತ್ರನಾಳ, ಗುದನಾಳ ಅಥವಾ ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರಲ್ಲಿ, ಈ ಬ್ಯಾಕ್ಟೀರಿಯಾವು ಗರ್ಭಕಂಠದ ಸೋಂಕಿಗೆ ಕಾರಣವಾಗುತ್ತದೆ. ಹಾಗಾಗಿ ದೈಹಿಕ ಸಂಬಂಧವನ್ನು ಹೊಂದಿದ ತಕ್ಷಣ ಬೆಡ್ಶೀಟ್ ಅನ್ನು ತೊಳೆಯಬೇಕು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.
Rakesh Poojary: ರಾಕೇಶ್ ಪೂಜಾರಿ ತಂಗಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದುಕೊಂಡಿದ್ದ