newsics.com
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ದಾಳಿಯನ್ನು ಖ್ಯಾತ ಸಂಗೀತ ನಿರ್ದೇಶಕ ಸಲೀಂ ಮರ್ಚೆಂಟ್ ಖಂಡಿಸಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ವೈರಲ್ ಆಗಿದೆ.
‘ಹಿಂದೂಗಳು ಎಂಬ ಕಾರಣಕ್ಕೆ ಪಹಲ್ಗಾಮ್ನಲ್ಲಿ ಅಮಾಯಕರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗಿದೆ. ಹಂತಕರು ಮುಸ್ಲಿಮರೇ? ಅಲ್ಲ, ಅವರು ಭಯೋತ್ಪಾದಕರು. ಯಾಕೆಂದರೆ ಇಸ್ಲಾಂ ಇದನ್ನು ಹೇಳಿಕೊಡುವುದಿಲ್ಲ. ಧರ್ಮದ ವಿಚಾರದಲ್ಲಿ ಯಾವುದೇ ಬಲವಂತ ಮಾಡುವಂತಿಲ್ಲ ಎಂದು ಖುರಾನ್ ನಲ್ಲಿ ಬರೆದಿದೆ’ ಎಂದು ಸಲೀಂ ಮರ್ಚೆಂಟ್ ವಿಡಿಯೋ ಆರಂಭಿಸಿದ್ದಾರೆ.
‘ಇಂಥ ಒಂದು ದಿನವನ್ನು ನೋಡುವಂತಾಯಿತಲ್ಲ ಎಂದು ಮುಸ್ಲಿಮನಾಗಿ ನನಗೆ ನಾಚಿಕೆ ಆಗುತ್ತಿದೆ. ನನ್ನ ಅಮಾಯಕ ಹಿಂದೂ ಸಹೋದರ, ಸಹೋದರಿಯರನ್ನು ಹತ್ಯೆ ಮಾಡಲಾಗಿದೆ. ಈ ದ್ವೇಷ ಯಾವಾಗ ಮುಗಿಯುತ್ತದೆ? ಕಳೆದ 2-3 ವರ್ಷಗಳಿಂದ ಕಾಶ್ಮೀರದ ಜನರು ಸರಿಯಾಗಿ ಜೀವನ ಮಾಡುತ್ತಿದ್ದರು. ಅವರ ಜೀವನದಲ್ಲಿ ಮತ್ತೆ ಅದೇ ಸಮಸ್ಯೆ ಶುರುವಾಗಿದೆ’ ಎಂದು ಸಲೀಂ ಮರ್ಚೆಂಟ್ ಹೇಳಿದ್ದಾರೆ.
‘ನನ್ನ ನೋವು ಮತ್ತು ಕೋಪವನ್ನು ಹೇಗೆ ವ್ಯಕ್ತಪಡಿಸಲಿ ಎಂಬುದೇ ತಿಳಿಯುತ್ತಿಲ್ಲ. ಅಮಾಯಕ ಜನರು ಪ್ರಾಣ ತೆತ್ತಿದ್ದಾರೆ. ತಲೆ ಬಾಗಿ ನಾನು ಪ್ರಾರ್ಥನೆ ಮಾಡುತ್ತೇನೆ. ಅವರ ಕುಟುಂಬದವರಿಗೆ ದೇವರು ಶಕ್ತಿ ನೀಡಲಿ. ಓಂ ಶಾಂತಿ’ ಎನ್ನುವ ಮೂಲ ಸಲೀಂ ಮರ್ಚೆಂಟ್ ಅವರು ವಿಡಿಯೋ ಪೂರ್ಣಗೊಳಿಸಿದ್ದಾರೆ. ಅವರ ಮಾತುಗಳಿಗೆ ಅನೇಕರು ಸಹಮತ ಸೂಚಿಸಿದ್ದಾರೆ.
https://www.instagram.com/reel/DIy51H6ToE8/?igsh=cmVoMjY5ODcweHN3