newsics.com
ಚೀನಾ ತನ್ನ ವಿಲಕ್ಷಣ ಆಹಾರ ಪದ್ಧತಿಯಿಂದ ವಿಶ್ವಪ್ರಸಿದ್ಧವಾಗಿದೆ. ಪಕ್ಷಿಗಳ ಸೂಪ್ನಿಂದ ಹಿಡಿದು ನಾಯಿ ಮಾಂಸದವರೆಗೆ ಅವರ ನೆಚ್ಚಿನ ಆಹಾರಗಳ ಲಿಸ್ಟ್ ನೋಡಿದ್ರೆ ತಲೆ ಗಿರ್ ಎನ್ನುತ್ತೆ.ಚೀನಾದ ಜನರು ಯಾವಾಗಲೂ ತಮ್ಮ ಚಿತ್ರ ವಿಚಿತ್ರ ಆಹಾರಗಳಿಂದ ಸುದ್ದಿಯಲ್ಲಿರುತ್ತಾರೆ. ಅವರ ಆಹಾರ ಶೈಲಿ ಜನರನ್ನು ತಬ್ಬಿಬ್ಬುಗೊಳಿಸುತ್ತದೆ.
ಇನ್ನೂ ಆನೆ ಲದ್ದಿ ಅಂದ ತಕ್ಷಣ ಕೆಲವರು ಮುಖವನ್ನು ತಿರುಗಿಸಿ ವ್ಯಾ… ಅಂದಿರಬಹುದು. ಅದರೆ ಇದೇ ಲದ್ದಿ ಯಿಂದ ಸ್ವೀಟ್ ತಯಾರಿಸಲಾಗುತ್ತದೆ ಎಂದರೆ ನಂಬುತ್ತೀರಾ. ಹೌದು ಚೀನಾದ ರೆಸ್ಟೋರೆಂಟ್ ವೊಂದರಲ್ಲಿ ಆನೆ ಲದ್ದಿಯಿಂದ ಸ್ವೀಟ್ ತಯಾರಿಸಲಾಗುತ್ತದೆಯಂತೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಂಘೈನಲ್ಲಿರುವ ರೆಸ್ಟೋರೆಂಟ್ ನಲ್ಲಿ ಆನೆಯ ಸಗಣಿಯಿಂದ ತಯಾರಿಸಿದ ಸಿಹಿ ತಿಂಡಿಯನ್ನು ನೀಡಲಾಗುತ್ತಿದೆ ಫುಡ್ ಬ್ಲಾಗರ್ ಒಬ್ಬರು ಈ ರೆಸ್ಟೋರೆಂಟ್ ನಲ್ಲಿ ಆಹಾರ ಸವಿದ ಬಳಿಕ ಈ ಸ್ಪೆಷಲ್ ಸ್ವೀಟ್ ರೆಸಿಪಿ ಬಗ್ಗೆ ತಿಳಿಸಿದ್ದು, ಆನೆ ಲದ್ದಿಯಿಂದ ತಯಾರಿಸಲಾಗುವ ಈ ಸ್ವೀಟ್ ರೆಸಿಪಿಗೆ ಎಲಿಫೆಂಟ್ ಡಂಗ್ ಡೆಸರ್ಟ್ ಎಂದು ಹೇಳಿದ್ದಾರೆ. ನಮಗೆಲ್ಲರಿಗೂ ಆನೆ ಲದ್ದಿ ಹೇಳಿದರೆ ವಾಕರಿಕೆ ಬರುತ್ತದೆ. ಆದರೆ ಈ ಆನೆಯ ಲದ್ದಿಯನ್ನು ಬಿಸಿಲಿನಲ್ಲಿ ಒಣಗಿಸಿ, ಅದಕ್ಕೆ ಕ್ರಿಮಿನಾಶಕ ಸಿಂಪಡಿಸುತ್ತಾರೆ. ಆ ಬಳಿಕ ಗಿಡಮೂಲಿಕೆಗಳು ಮತ್ತು ಜೇನುತುಪ್ಪದ ಬೆರೆಸಿ ಸ್ವೀಟ್ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಅದಲ್ಲದೇ ಆನೆ ಲದ್ದಿಯಿಂದ ತಯಾರಿಸಲಾಗುವ ಈ ಸಿಹಿ ತಿಂಡಿಯ ಬೆಲೆ 45,400 ರೂ ಅಂತೆ ಮಾಡಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ.