newsics.com
ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಗ್ರಾಮ ದೇವರಾದ ಹನುಮಂತ ದೇವರ ಜಾತ್ರೆ ನಡೆಯುತ್ತಿದೆ.
ಇನ್ನು ಜಾತ್ರೆಯಲ್ಲಿ ಗ್ರಾಮದ ಅವಿವಾಹಿತ ಯುವಕರು ಒಂದು ಪ್ಲ್ಯಾನ್ ಮಾಡಿದ್ದಾರೆ. ಅವಿವಾಹಿತರು ಮದುವೆಯಾಗಲು ಕನ್ಯೆ ಸಿಗದಿದ್ದಕ್ಕೆ ಜಾತ್ರೆಗೆ ಬಂದವರ ಗಮನ ಸೆಳೆಯಲು ತಮಗೊಂದು ಕನ್ಯೆ ನೋಡಿ ಎಂದು ಬ್ಯಾನರ್ ಹಾಕಿದ್ದಾರೆ. 20 ಜನ ಯುವಕರು ಬ್ರ್ಯಾಂಡ್ ಬಾಯ್ಸ್ ಹೆಸರಿನಲ್ಲಿ ಬ್ಯಾನರ್ ಹಾಕಿದ್ದಾರೆ.
ಗ್ರಾಮೀಣ ಭಾಗ ಹಾಗೂ ಕೃಷಿ ಕೆಲಸ ಮಾಡುತ್ತಿರುವ ಕಾರಣ ಇವರಿಗೆ ಕನ್ಯೆ ಕೊಡುತ್ತಿಲ್ಲ. ಹೀಗಾಗಿ 20 ಜನ ಯುವಕರ ತಂಡ ತಮ್ಮೆಲ್ಲರ ಫೋಟೋಗಳನ್ನು ಬ್ಯಾನರ್ನಲ್ಲಿ ಹಾಕಿ ಕೆಳಗಡೆ ಜಾತ್ರೆಗೆ ಬಂದ ಭಕ್ತಾದಿಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ “ಬ್ಯಾನರ್ ನೋಡಿ ಹಾಗೇ ಹೋಗಬೇಡಿ. ಎಲ್ಲರಿಗೂ ಹುಡುಗಿ ನೋಡಿ” ಎಂದು ಬರೆಸಿದ್ದಾರೆ. ಬ್ಯಾಚುಲರ್ ಬಾಯ್ಸ್ ಹಾಕಿರುವ ಬ್ಯಾನರ್ ಇದೀಗ ಜಾತ್ರೆಗೆ ಬಂದವರ ಗಮನ ಸೆಳೆಯುತ್ತಿದೆ.
ಮದುವೆ ವಯಸ್ಸಿಗೆ ಬಂದ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ನಮಗೆ ಯಾರಾದರೂ ಹೆಣ್ಣು ನೋಡಿ ಎಂದು ಇವರು ಬ್ಯಾನರ್ ಹಾಕುವ ಮೂಲಕ ಅಲಳು ತೋಡಿಕೊಂಡಿದ್ದಾರೆ. ಇದು ಫನ್ನಿ ಎನಿಸಿದರೂ ಗ್ರಾಮಿಣ ಭಾಗದ ಯುವಕರಿಗೆ ಕೃಷಿ ಕೆಲಸ ಮಾಡುವ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಗಂಭೀರ ಸಮಸ್ಯೆಗೆ ಇದೊಂದು ಉದಾಹರಣೆಯಾಗಿದೆ. ಹೆಣ್ಣು ಕೇಳಲು ಹೋದರೆ ಸರ್ಕಾರಿ ನೌಕರಿ ಇದೆಯಾ, ಬಿಸಿನೆಸ್ ಮಾಡುತ್ತಾರಾ? ಐಟಿ-ಬಿಟಿಯಲ್ಲಿ ಕೆಲಸ ಮಾಡುತ್ತಿದ್ದಾರಾ? ಎಂದು ಕೇಳಲಾಗುತ್ತಿದೆ. ಆದರೆ. ಗ್ರಾಮೀಣ ಭಾಗದವರು ಕೃಷಿ ಉದ್ಯೋಗ ಮಾಡುತ್ತಿದ್ದೇವೆಂದರೆ ಹೆಣ್ಣು ತೋರಿಸದಂತಾಗಿದೆ.