newsics.com
ಪಹಲ್ಗಾಮ್: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಎರಡು ತಾಸಿನ ಬಳಿಕ, ಕಾಶ್ಮೀರದ ಮಸೀದಿಗಳಿಂದ ಐತಿಹಾಸಿಕ ಘೋಷಣೆ ಮಾಡಲಾಯಿತು. ಇದರಲ್ಲಿ ಪಹಲ್ಗಾಮ್ ದಾಳಿ ಇಸ್ಲಾಂ ಮತ್ತು ಮಾನವೀಯತೆಗೆ ವಿರುದ್ಧವಾಗಿದೆ ಎಂದು ಹೇಳಲಾಗಿತ್ತು. ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಮತ್ತು ಈ ದಾಳಿಯು ಕಾಶ್ಮೀರದ ಶಾಂತಿ ಮತ್ತು ಏಕತೆಯನ್ನು ಹಾಳುಮಾಡುವ ಪಿತೂರಿಯಾಗಿದೆ.
ಕಾಶ್ಮೀರ ನಮ್ಮ ಸಾಮಾನ್ಯ ಮನೆ ಮತ್ತು ಅದನ್ನು ಭಯೋತ್ಪಾದಕರ ಕೈಗೆ ಬೀಳಲು ನಾವು ಬಿಡುವುದಿಲ್ಲ ಎಂಬ ಸಂದೇಶ ಸಾರಲಾಯ್ತು. ಕಾಶ್ಮೀರದ ಧಾರ್ಮಿಕ ಮುಖಂಡರು ಪ್ರವಾಸಿಗರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದರು ಮತ್ತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಅಲ್ಲದೇ ಇಂತಹ ಹೇಡಿತನದ ದಾಳಿಗಳನ್ನು ನಡೆಸುವವರನ್ನು ಸುಮ್ಮನೆ ಬಿಡಬಾರದು ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ಸ್ಥಳೀಯ ಜನರು ಮೇಣದಬತ್ತಿ ಮೆರವಣಿಗೆ ನಡೆಸಿದರು. ಏತನ್ಮಧ್ಯೆ, ಶ್ರೀನಗರದಲ್ಲಿ ಸ್ಥಳೀಯ ಜನರು ಮೇಣದಬತ್ತಿಗಳನ್ನು ಬೆಳಗಿಸುವ ಮೂಲಕ ಪ್ರತಿಭಟಿಸಿದರು. ಚಟುವಟಿಕೆಯಿಂದ ತುಂಬಿರುತ್ತಿದ್ದ ಕಾಶ್ಮೀರದ ಲಾಲ್ ಚೌಕ್ ಖಾಲಿಯಾಗಿ ಕಾಣುತ್ತಿತ್ತು.
ಲಷ್ಕರ್-ಎ-ತೈಬಾದ ಹೊಸ ಸಂಘಟನೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಹಫೀಜ್ ಸಯೀದ್ ನ ಆಪ್ತ ಸಹಾಯಕ ಮತ್ತು ಲಷ್ಕರೆ ಉಪ ಮುಖ್ಯಸ್ಥ ಸೈಫುಲ್ಲಾ ಖಾಲಿದ್ ಅಲಿಯಾಸ್ ಸೈಫುಲ್ಲಾ ಕಸೂರಿ ಈ ದಾಳಿಯಲ್ಲಿ ಭಾಗಿಯಾಗಿದ್ದಾನೆ ಎಂದು ವರದಿಯಾಗಿದೆ. ಅವನಿಗೆ ಐಎಸ್‌ಐ ಅಧಿಕಾರಿಗಳೊಂದಿಗೆ ಆಳವಾದ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ.

ಪಹಲ್ಗಾಮ್ ದಾಳಿಯ ನಂತರ, ಅಲ್ಲಿನ ಜನರು ಕ್ಯಾಂಡಲ್ ಲೈಟ್ ಮಾರ್ಚ್ ನಡೆಸಿದರು. ಇದರ ಪ್ರತಿಧ್ವನಿ ಪಾಕಿಸ್ತಾನವನ್ನು ತಲುಪುತ್ತದೆ ಎಂಬುವುದರಲ್ಲಿ ಯಾವ ಅನುಮಾನವೂ ಇಲ್ಲ.
Pahalgam Terrorist Attack ಪಹಲ್ಗಾಮ್ ದಾಳಿ : ಸಂಜೆ ರಾಜ್ಯಕ್ಕೆ ಆಗಮಿಸಲಿದೆ ಮಂಜುನಾಥ್ ರಾವ್ ಮೃತದೇಹ