newsics.com
ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ರಾವ್ ಮೃತದೇಹ ಬುಧವಾರ ಸಂಜೆ ರಾಜ್ಯಕ್ಕೆ ಆಗಮಿಸಲಿದೆ. ಮಂಜುನಾಥ್ ರಾವ್ ಅವರ ಮೃತದೇಹ ಸಂಜೆ 6 ಗಂಟೆಗೆ ರಾಜ್ಯಕ್ಕೆ 6E 3103/ 6E 5269/ 6E 7731 ವಿಮಾನದ ಮೂಲಕ ತಲುಪಲಿದೆ.
ದಾಳಿಯಲ್ಲಿ ಮೃತಪಟ್ಟ ಮಧುಸೂದನ್ ರಾವ್ ಅವರು ಮೂಲತಃ ಅಂಧ್ರದವರಾಗಿದ್ದು ರಾಮಮೂರ್ತಿ ನಗರದಲ್ಲಿ ನೆಲೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಮೃತದೇಹ ಮಧ್ಯಾಹ್ಮ 3 ಗಂಟೆಗೆ 6E 3105/ 6E 5015 ವಿಮಾನದಲ್ಲಿ ಮುಂಬೈ ಮೂಲಕ ಚೆನೈ ತಲುಪಲಿದೆ.
ಇನ್ನು ಉಗ್ರರ ಗುಂಡೇಟಿಗೆ ಬಲಿಯಾದ ಮತ್ತೋರ್ವ ಕರ್ನಾಟಕದ ನಿವಾಸಿ ಭರತ್ ಭೂಷನ್ ಮೃತದೇಹವೂ, 6E 3105/ 6E 5252 ವಿಮಾನದಲ್ಲಿ ಮಧ್ಯಾಹ್ಮ 3 ಗಂಟೆಗೆ ಮುಂಬೈ ಮೂಲಕ ಬೆಂಗಳೂರಿಗೆ ತಲುಪಲಿದೆ.
ಇನ್ನು ಗಾಯಗೊಂಡವರ ಯೋಗ ಕ್ಷೇಮ ವಿಚಾರಿಸಿಲು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಾಶ್ಮೀರ ಪಹಲ್ಗಾಮ್‌ಗೆ ತೆರಳಿದ್ದಾರೆ.
Pahalgam Terrorist Attack: ಪಹಲ್ಗಾಮ್ ಉಗ್ರ ದಾಳಿಯ ಮಾಸ್ಟರ್ಮೈಂಡ್ ಸೈಫುಲ್ಲಾ ಖಾಲಿದ್: ವೈರಲ್ ವಿಡಿಯೋ ನೋಡಿ