newsics.com
ನವದೆಹಲಿ: ಹೆಸರಾಂತ ಐಟಿ ಕಂಪನಿಯಾದ ಇನ್ಫೋಸಿಸ್ ಇದೀಗ ಮೈಸೂರಿನಲ್ಲಿನ ಮತ್ತೆ 240 ಆರಂಭಿಕ ಹಂತದ ಉದ್ಯೋಗಿಗಳನ್ನು, ಆಂತರಿಕ ಮೌಲ್ಯಮಾಪನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಕಾರಣಕ್ಕೆ ವಜಾಗೊಳಿಸಿದೆ. ಇದೇ ರೀತಿ ಫೆಬ್ರವರಿಯಲ್ಲಿ 300 ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಒಂದು ತಿಂಗಳ ಸಂಬಳ ನೀಡಲಾಗುವುದು. ಒಂದು ತಿಂಗಳು ಮೈಸೂರಿನ ತರಬೇತಿ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ಬೆಂಗಳೂರು ಅಥವಾ ಹುಟ್ಟೂರಿಗೆ ಮರಳಲು ಭತ್ಯೆಗಳಂತಹ ಸೌಲಭ್ಯಗಳನ್ನು ಕಂಪನಿಯ ವತಿಯಿಂದ ಒದಗಿಸಲಾಗುವುದು ಇ-ಮೇಲ್‌ನಲ್ಲಿ ತಿಳಿಸಿದೆ
ಈ ಬಗ್ಗೆ ಪಿಟಿಐ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಇನ್ಫೋಸಿಸ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಶಾಜಿ ಮ್ಯಾಥ್ಯೂ, ‘ಕಂಪನಿಯು ಅಭ್ಯರ್ಥಿಗಳ ಮೇಲೆ ಹೂಡಿಕೆ ಮಾಡಿ ಅವರಿಗೆ ತರಬೇತಿ ನೀಡುತ್ತದೆ. ಜೊತೆಗೆ ಸಂಬಳವನ್ನೂ ಕೊಡುತ್ತದೆ. ಅಂತಹವರನ್ನು ಕೆಲಸದಿಂದ ತೆಗೆಯುವುದರಿಂದ ನಮಗೂ ಲಾಭವಿಲ್ಲ’ ಎಂದು ಹೇಳಿದ್ದಾರೆ.