newsics.com
ಉತ್ತರ ಪ್ರದೇಶ: ವರದಕ್ಷಿಣೆ ತರಲಿಲ್ಲ ಅಂತ ಮಹಿಳೆ ವಾಸವಿದ್ದ ಮನೆಗೆ ನುದ್ದಿ ಆಕೆಯ ಪತಿ ತೀವ್ರವಾಗಿ ಹಿಂಸೆ ನೀಡಿ ಆಕೆಯ ಉದ್ದನೇಯ ತಲೆಕೂದಲನ್ನು ಕತ್ತರಿಸಿದಂತಹ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಸಾಂಡಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗಂಡ ಹಾಗೂ ಆಕೆಯ ಮನೆಯವರು ಮದುವೆಯ ವೇಳೆ ನೀಡುವುದಾಗಿ ಹೇಳಿದ್ದ ವರದಕ್ಷಿಣೆ ಹಣವನ್ನು ನೀಡಿಲ್ಲ ಎಂದು ಹೇಳಿ ಮಹಿಳೆಗೆ ಕಿರುಕುಳ ನೀಡುತ್ತಿದ್ದರು ಎಂದು ವರದಿಯಾಗಿದೆ.
ಸರಮುಲ್ಲಾ ಗಂಜ್ ಪ್ರದೇಶದಲ್ಲಿ ಮಹಿಳೆ ವಾಸ ಮಾಡುತ್ತಿದ್ದರು. ಈಗ ಗಂಡ ಹಾಗೂ ಆಕೆಯ ಮನೆಯವರು ಆಕೆಯ ಮೇಲೆ ಹಲ್ಲೆ ಮಾಡಿ ತಲೆಕೂದಲಿಗೆ ಕತ್ತರಿ ಹಾಕಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿ ಪತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸ್ಥಳೀಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವನ್ನು ಸಹ ತನಿಖೆಯ ಭಾಗವಾಗಿ ಪರಿಗಣಿಸಲಾಗಿದೆ. ಮಹಿಳೆಯ ಹೇಳಿಕೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
Viral video ತಿಮ್ಮಪ್ಪನ ಸನ್ನಿಧಿಯಲ್ಲಿ ರಾಜ್ ನಿಡಿಮೋರು ಜೊತೆ ನಟಿ ಸಮಂತಾ: ವೈರಲ್ ವಿಡಿಯೋ ನೋಡಿ