newsics.com
ಮಂಗಳೂರು: ಮಂಗಳೂರಿನ ಹೊರವಲಯ ಕಲ್ಲಾಪು ಸಮೀಪದ ನಿರ್ಜನ ಪ್ರದೇಶದಲ್ಲಿ ಹೊರರಾಜ್ಯದ ಯುವತಿಯೊಬ್ಬಳು ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಯುವತಿಯ ನೀಡಿದ ದೂರಿನ ಆಧಾರದ ಮೇಲೆಆಟೋ ಚಾಲಕ ಮುಲ್ಕಿಯ ಪ್ರಭುರಾಜ್ (38), ಕೋಟೆಕಾರ್ ಕುಂಪಲದ ಮಿಥುನ್ (37) ಮತ್ತು ಪಡೀಲ್ ಕೊಡಕ್ಕಲ್ನ ಮನೀಶ್ (30) ಎಂಬುವರನ್ನು ಬಂಧಿಸಲಾಗಿದೆ.
ತಡರಾತ್ರಿ ವೇಳೆ ಯುವತಿಯೋರ್ವಳು ನಶೆಯ ರೀತಿಯಲ್ಲಿ ಸ್ಥಳೀಯ ಮನೆಯೊಂದರ ಬಾಗಿಲು ತಟ್ಟಿ ನೀರು ಕೇಳಿದ್ದಾಳೆ. ಆದರೆ, ನೀರು ಕೇಳಿದ ಕೆಲವೇ ಕ್ಷಣಗಳಲ್ಲಿ ಆಕೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾಳೆ ಎನ್ನಲಾಗಿದೆ.
ಇದನ್ನು ಗಮನಿಸಿದ ಮನೆಯವರು ತಕ್ಷಣ ಪೊಲೀಸ್ ತುರ್ತು ಸೇವೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ
ಕೇರಳದ ಪ್ಲೈವುಡ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಕೂಚ್ ಬಿಹಾರದ ಮೂಲದ ಯುವತಿ ಏ.16ರಂದು ಪರಿಚಿತ ಯುವಕನೊಂದಿಗೆ ಉದ್ಯೋಗ ಹುಡುಕಿಕೊಂಡು ಮಂಗಳೂರಿಗೆ ಬಂದಿದ್ದಳು.
ಆಟೋ ಚಾಲಕನಿಗೂ ಯುವತಿಗೆ ಸ್ನೇಹ ಬೆಳೆದಿದೆ. ಬಳಿಕ ಪಶ್ಚಿಮ ಬಂಗಾಳಕ್ಕೆ ಹೋಗಲು ನಿರ್ಧರಿಸಿದ ಯುವತಿಯನ್ನು ಆಟೋ ಚಾಲಕ ರೈಲ್ವೆ ನಿಲ್ದಾಣಕ್ಕೆ ಬಿಡಲು ಬಂದಿದ್ದ. ಈ ವೇಳೆ ರೈಲ್ವೆ ಸ್ಟೇಷನ್ ಬಳಿ ಆಟೋಗೆ ಮಿಥುನ್ ಮತ್ತು ಮನೀಶ್ ಇವರ ಜೊತೆ ಸೇರಿಕೊಂಡಿದ್ದರು.
ಆಟೋ ಚಾಲಕ ತನಗೆ ಮಾದಕ ವಸ್ತುವನ್ನು ನೀಡಿದ್ದಾರೆ, ನಂತರ ಪ್ರಜ್ಞೆ ತಾನು ಕಳೆದುಕೊಂಡಿದ್ದೇನೆ ಎಂದು ಯುವತಿ ಆರೋಪಿಸಿದ್ದಾರೆ. ಭಾಗಶಃ ಪ್ರಜ್ಞೆ ಬಂದಾಗ, ಆಟೋ ಚಾಲಕ ಸೇರಿದಂತೆ ಮೂವರು ವ್ಯಕ್ತಿಗಳೊಂದಿಗೆ ಕಾರಿನಲ್ಲಿ ತಾನಿದ್ದೆ. ಆಗ ಕೂಗಿಕೊಂಡಾಗ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ದೂರು ನೀಡಿದ್ದಾಳೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
https://www.newsics.com/2025/04/17/newlywed-escapes-with-lover-after-locking-mother-in-law-in-room/