newsics.com
ಉದ್ಯೋಗಸ್ಥ ಮಹಿಳೆಯರು ಹೆರಿಗೆಯ ನಂತರ ಎಳೆಯ ಮಗುವನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಮರಳುವಾಗ ಅನುಭವಿಸುವ ನೋವು ನಿಜಕ್ಕೂ ಮನ ಕಲಕುವಂತದ್ದು. ಬದುಕಿನ ಅನಿವಾರ್ಯತೆಗಾಗಿಯೋ ಅಥವಾ ಸ್ವಾವಲಂಬನೆಯ ಉದ್ದೇಶಕ್ಕೋ ತಾಯಿ ಮಗುವನ್ನು ಬಿಟ್ಟು ಕೆಲಸಕ್ಕೆ ಹೊರಡುವಾಗ, ಹೃದಯವನ್ನು ಮನೆಯಲ್ಲೇ ಬಿಟ್ಟು ಹೋಗುತ್ತಾಳೆ ಎಂದರೆ ಅತಿಶಯೋಕ್ತಿ ಅಲ್ಲ. ಇದು ಮಹಿಳೆಯರು ಎದುರಿಸುವ ಕಷ್ಟಕರ ಸಂಗತಿಗಳಲ್ಲಿ ಒಂದು. ಮಗುವುಳ್ಳ ತಾಯಂದಿರು ಕೆಲಸಕ್ಕೆ ಹೊರಟಾಗ , ಮಗುವನ್ನು “ಬಿಟ್ಟು” ಹೊರಟಿದ್ದಾಳೆ ಎಂದು ಬಹಳಷ್ಟು ಮಂದಿ ಆಕೆಯನ್ನು ಜಡ್ಜ್ ಮಾಡುತ್ತಾರೆ. ಆ ಹಣೆಪಟ್ಟಿಗೆ ಅವರು ತಲೆ ಕೆಡಿಸಿಕೊಳ್ಳದಿದ್ದರೂ, ತನ್ನ ಕಂದಮ್ಮನನ್ನು ಕೆಲವು ಸಮಯ ಬಿಟ್ಟಿದ್ದರೆ ಅದಕ್ಕೆ ಎಷ್ಟು ಕಷ್ಟವಾಗುತ್ತದೋ ಎಂದುಕೊಳ್ಳುವಾಗ, ಕಾಡುವ ತಪ್ಪಿತಸ್ಥ ಭಾವನೆಯ ನೋವನ್ನು ಅವಳೇ ಬಲ್ಲಳು. ಇಲ್ಲೊಂದು ಮಗು ತಾಯಿ ಕೆಲಸಕ್ಕೆ ಹೋಗು ವುದನ್ನು ಕಂಡು ಮಗು ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಕೆಲವು ದಿನಗಳಿಂದ ಇಂಟರ್‌ನೆಟ್‌ನಲ್ಲಿ ಪುಟ್ಟ ಮಗುವೊಂದು ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಕಿಟಕಿಯಲ್ಲಿ ಅತ್ತಿಂದಿತ್ತ ನೋಡುತ್ತಾ ಕಣ್ಣೀರು ತುಂಬಿಕೊಂಡ ಕಣ್ಣುಗಳಿಂದ ಮಮ್ಮಾ.. ಮಮ್ಮಾ ಎಂದು ಕೂಗುತ್ತಿದೆ. ಈ ವಿಡಿಯೋ ನೋಡಿದ್ರೆ ಕಲ್ಲುಹೃದಯದಲ್ಲಿಯೂ ಕಣ್ಣೀರು ಜಿನುಗುತ್ತದೆ. ಮಗುವಿನ ದುಃಖ ನಿಮ್ಮ ಮನಸ್ಸನ್ನು ಭಾರವಾಗಿಸುತ್ತದೆ.
ವೈರಲ್ ಆಗಿರುವ ವಿಡಿಯೋವನ್ನು gyanclasss ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
https://www.instagram.com/reel/DISozZJPyJe/?igsh=bjRrcWJrd2Viem9m
https://www.newsics.com/2025/04/13/the-plow-slipped-but-the-runners-reached-the-goal/