newsics.com
ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಕಾಡುವ ಒಂದೇ ಪ್ರಶ್ನೆ ಪಿಯುಸಿ ನಂತರ ಮುಂದೇ ಯಾವ ಕೋರ್ಸ್ ಆಯ್ಕೆ ಮಾಡಬೇಕು ಎನ್ನುವುದು.
ಅನೇಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ನೋಡಿದ ನಂತರ ಮುಂದೆ ಏನು ಮಾಡಬೇಕೆಂದು ಮತ್ತು ಏನು ಓದಬೇಕೆಂದು ಗೊಂದಲಕ್ಕೊಳಗಾಗಬಹುದು.
ನೀವು ಕಲಾ ವಿಷಯದೊಂದಿಗೆ ದ್ವಿತೀಯ ಪಿಯುಸಿಯನ್ನು ಮುಗಿಸಿದ್ದರೆ, ನೀವು ಮುಂದೆ ಪದವಿಯಲ್ಲಿ ಫ್ಯಾಶನ್ ಡಿಸೈನಿಂಗ್, ಹೋಟೆಲ್ ಮ್ಯಾನೇಜ್‌ಮೆಂಟ್, ಪ್ರಾಡಕ್ಟ್ ಡಿಸೈನ್, ಶೂ ಡಿಸೈನ್, ಎಥ್ನೋಗ್ರಫಿ, ಡಿಪ್ರೆಶನ್ ಕೌನ್ಸೆಲಿಂಗ್, ಬೇಕರಿ ಮತ್ತು ಸ್ವೀಟ್ಸ್, ಲೆದರ್ ಡಿಸೈನಿಂಗ್ ಮತ್ತು ಗ್ರಾಫಾಲಜಿಯಂತಹ ವೃತ್ತಿಗಳನ್ನು ಪರಿಗಣಿಸಬಹುದು. ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ರೇಡಿಯೋ ಪತ್ರಿಕೋದ್ಯಮ, ಜಾಹೀರಾತು, ಅನಿಮೇಷನ್, ವೆಬ್ ಡಿಸೈನಿಂಗ್, ಮಾಧ್ಯಮ ಸಂಶೋಧನೆ ಮತ್ತು ಡಿಜಿಟಲ್ ಮಾಧ್ಯಮದಂತಹ ವಿವಿಧ ಮಾರ್ಗಗಳನ್ನು ನೀಡುವ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದು.
ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಓದಿದ್ದರೆ ಅತಂಹ ವಿದ್ಯಾರ್ಥಿಗಳಿಗೆ ಚಾರ್ಟೆಡ್ ಅಕೌಂಟೆನ್ಸಿ ಉತ್ತಮ ಆಯ್ಕೆಯಾಗಿದೆ. ಈ ಹುದ್ದೆಯಲ್ಲಿ ಹೆಚ್ಚಿನ ಸಂಬಳ ಪಡೆಯುವ ಅವಕಾಶವಿರುತ್ತವೆ. ಆದರೆ ಪರಿಶ್ರಮ ಕೂಡ ಇದಕ್ಕೆ ಅಗತ್ಯವಿದೆ. ಇದು ತುಂಬಾ ಚಾಲೆಂಜಿಗ್ ಆಗಿರುವ ಕ್ಷೇತ್ರ. ನೀವು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಕಂಪನಿಗಳಲ್ಲಿ ಉತ್ತಮ ವೇತನದೊಂದಿಗೆ ಕೆಲಸ ಸಿಗುತ್ತದೆ.
ನೀವು ವಿಜ್ಞಾನ ವಿಷಯದೊಂದಿಗೆ 12ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದರೆ, ನೀವು ಎಂಬಿಬಿಎಸ್, ಆರ್ಕಿಟೆಕ್ಚರ್, ಏವಿಯೇಷನ್‌ನಲ್ಲಿ ಸೌಂಡ್ ಇಂಜಿನಿಯರಿಂಗ್, ಬಯೋಮೆಡಿಕಲ್ ವೃತ್ತಿಗಳು, ಓಸಿಯೋನೋಗ್ರಫಿ, ಬಯೋಕೆಮಿಸ್ಟ್ರಿ, ಫೋರೆನ್ಸಿಕ್ ಸೈನ್ಸ್, ಸೆಲ್ ಥೆರಪಿ, ಜೆನೆಟಿಕ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಏರೋಸ್ಪೇಸ್ ಎಂಜಿನಿಯರಿಂಗ್ ಮುಂತಾದ ಆಯ್ಕೆ ಮಾಡಿಕೊಳ್ಳಬಹುದು.