newsics.com
ಬೆಂಗಳೂರು : ಇತ್ತೀಚೆಗೆ ತಿನ್ನೋ ಆಹಾರ ಕಲುಷಿತ ಅನ್ನೋ ಅಂಶ ಬೆಚ್ಚಿಬೀಳಿಸಿತ್ತು.ಈಗ ಕುಡಿಯೋ ನೀರು ಕೂಡ ಡೇಂಜರಸ್ ಅನ್ನೋ ಶಾಕಿಂಗ್ ವಿಚಾರ ತಲೆಕೆಡಿಸಿದೆ.
ಇದೀಗ ಬಾಟಲ್ ಮೂಲಕ ಪೂರೈಕೆ ಆಗುವ ಕುಡಿಯುವ ನೀರು ಶೇಕಡ 50ರಷ್ಟು ಕಳಪೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ.
ಈ ಕುರಿತು ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ತರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಈಗಾಗಲೇ 296 ಕುಡಿಯುವ ನೀರಿನ ಬಾಟಲ್ ಮಾದರಿಗಳ ಟೆಸ್ಟ್ ಮಾಡಿದ್ದು, ಇದರಲ್ಲಿ72 ಸುರಕ್ಷಿತ ಹಾಗೂ 95 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿದೆ. ಇದಲ್ಲದೇ ಹಸಿರು ಬಟಾಣಿಗೆ ಹಸಿರು ಕಲರ್ ಬರಿಸಲು ಟೆಟಾರ್ಜಿನ್ ಕೆಮಿಕಲ್ ಬಳಸಿರುವ ಆತಂಕಕಾರಿ ವಿಷಯ ಹೊರಬಿದ್ದಿದೆ. ಕುಡಿಯುವ ನೀರಿನ ಬಾಟಲಿ ಮಾತ್ರವಲ್ಲದೇ ಖಾರ ಮಿಕ್ಚರ್, ಪನ್ನೀರ್ ಹಾಗೂ ಐಸ್ಕ್ರೀಂ ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ತಯಾರಿಕಾ ಘಟಕಗಳಲ್ಲಿ ಲೋಪ ಕಂಡುಬಂದ ಹಿನ್ನೆಲೆ ನೋಟಿಸ್ ನೀಡಲಾಗಿರುವುದಾಗಿ ಗುಂಡೂರಾವ್ ಹೇಳಿದ್ದಾರೆ.
Karnataka 2nd PUC Result:ದ್ವಿತೀಯ PU ಫಲಿತಾಂಶ ಪ್ರಕಟ-ಎಂದಿನಂತೆ ಹೆಣ್ಣುಮಕ್ಕಳದ್ದೇ ಮೇಲುಗೈ