newsics.com
ಹಾಲು ಅಮೃತಕ್ಕೆ ಸಮಾನ ಎಂದು ಹೇಳುತ್ತಾರೆ. ಅದನ್ನು ಅಡುಗೆಗೆ ಮತ್ತು ಕುಡಿಯಲು ಬಳಸುವುದು ಮಾತ್ರವಲ್ಲದೇ ಸೌಂದರ್ಯವರ್ಧಕವಾಗಿಯೂ ಬಳಸಬಹುದು.ಮಾರುಕಟ್ಟೆಯಲ್ಲಿ ಸಿಗುವ ಯಾವುದ್ಯಾವುದೋ ಕ್ರಿಮ್‌ಗಳನ್ನು ಬಳಸಿ ಮುಖದ ಅಂದವನ್ನು ಹಾಳು ಮಾಡಿಕೊಳ್ಳಬೇಡಿ. ಬದಲಾಗಿ ಹಾಲಿನಿಂದ ಮಾಡಿದ ಮನೆ ಮದ್ದನ್ನು ಉಪಯೋಗಿಸಿ.
ಮನೆಯಲ್ಲಿ ರಾತ್ರಿ ಮಲಗುವ ಮುನ್ನ ಹಾಲಿನ ಕೆನೆಯನ್ನು ಮುಖಕ್ಕೆ ಹಚ್ಚಿ, ಬೆಳಗ್ಗೆ ಬಿಸಿ ನೀರಿನಿಂದ ಮುಖವನ್ನು ತೊಳೆಯಿರಿ. ಪ್ರತಿದಿನ ಹೀಗೆ ಮಾಡುತ್ತ ಬಂದರೆ ಮುಖವು ಹೊಳಪು ಹೆಚ್ಚಾಗುತ್ತದೆ.
ಕೆನೆ ಹಚ್ಚುವುದರಿಂದ ಮುಖದಲ್ಲಿ ಇರುವ ಕಪ್ಪು ಕಲೆಗಳು ಮಾಯವಾಗುತ್ತದೆ ಹಾಗೂ ಮುಖದಲ್ಲಿ ಸುಕ್ಕುಗಳಿದ್ದರೆ ಕಡಿಮೆಯಾಗುತ್ತದೆ. ಹಾಲಿನ ಕೆನೆಯನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚುವುದರಿಂದ ಮುಖಕ್ಕೆ ಹೊಸ ಕಾಂತಿ ಮತ್ತು ಬಿಳುಪು ಬರುತ್ತದೆ.
ನಿಮ್ಮ ಚರ್ಮವನ್ನು ಹಸಿ ಹಾಲಿನಿಂದ ಮಸಾಜ್ ಮಾಡಬಹುದು. ಹತ್ತಿಯನ್ನು ಹಸಿ ಹಾಲಿನಲ್ಲಿ ನೆನೆಸಿ ಮತ್ತು ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿ. ನಂತರ ಲಘು ಕೈಗಳಿಂದ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ತ್ವಚೆಯ ರಕ್ತ ಸಂಚಾರ ಚೆನ್ನಾಗಿ ಆಗುವುದಲ್ಲದೆ ಮೈಬಣ್ಣವೂ ಸುಧಾರಿಸುತ್ತದೆ.
ಹಾಲು ಒಂದು ನೈಸರ್ಗಿಕವಾದ ಉತ್ಪನ್ನವಾಗಿರುವುದರಿಂದ ಇದರಿಂದ ಮುಖಕ್ಕೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.
https://www.newsics.com/2025/04/04/son-lost-his-life-because-he-was-asked-why-he-took-his-iphone/