newsics.com
ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರ ಪುತ್ರ ಹುಡುಗಿಯಾದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
ಸಂಜಯ್ ಬಂಗಾರ್ ಅವರ ಹಿರಿಯ ಮಗ ಆರ್ಯನ್ ತಾನು ಹಾರ್ಮೋನ್ ಪರಿವರ್ತಿಸಿಕೊಂಡಿದ್ದು, ಇದೀಗ ಹುಡುಗನಿಂದ ಹುಡುಗಿಯಾಗಿ ಬದಲಾಗಿದ್ದಾರೆ. ಅಲ್ಲದೆ ಇನ್ಮುಂದೆ ನನ್ನ ಹೆಸರು ಆರ್ಯನ್ ಅಲ್ಲ, ಬದಲಾಗಿ ಅನನ್ಯಾ ಎಂದಿದ್ದಾರೆ. ಸದ್ಯ ಅನಯಾ ಬಂಗಾರ್ ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್, ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಅನನ್ಯಾ ಕಳೆದ 10 ತಿಂಗಳಿಂದ ಹಾರ್ಮೋನ್ ಬದಲಾವಣೆಗಾಗಿ ಚಿಕಿತ್ಸೆ ಪಡೆದಿದ್ದಾರೆ. ಇದೀಗ 10 ತಿಂಗಳ ಶಸ್ತ್ರಚಿಕಿತ್ಸೆಯ ನಂತರ ಹುಡುಗಿಯಾಗಿ ರೂಪಾಂತರಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ದೇಹದಲ್ಲಾದ ಪರಿವರ್ತನೆಯಿಂದಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು,ಬಂಗಾರ್ ಪುತ್ರ ಹುಡುಗಿಯಾಗಿ ಬದಲಾಗಿದ್ದಾರೆ.
https://www.instagram.com/reel/DH5fSBcsXhN/?igsh=aDFmOG91aWhpdXIx
https://www.newsics.com/2025/04/03/whatsapp-bans-9-7-million-accounts-in-india/