newsics.com
ಚಿಕ್ಕಮಗಳೂರು: ಹಿಂದೂ ಯುವತಿಯು ಮುಸ್ಲಿಂ ಯುವಕನ ಜೊತೆ ಮದುವೆಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಈ ವಿಚಾರಕ್ಕೆ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ಸಂಘಟನೆಗಳು ಲವ್ ಜಿಹಾದ್ ಆರೋಪವನ್ನೂ ಮಾಡಿವೆ.
ರಿಜಿಸ್ಟರ್ ಮ್ಯಾರೇಜ್ಗೆ ಸಾಕ್ಷಿಯಾಗಿದ್ದ ಹಿಂದೂ ಯುವಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಬೆದರಿಕೆ ಹಾಕಲಾಗಿದೆ.
ಧರ್ಮದ್ರೋಹಿ ಎಂದು ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಚಿಕ್ಕಮಗಳೂರು ಫೇಸ್ ಬುಕ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದೆ. ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಮಹೇಶ್ ಎಂಬುವವರು ರಿಜಿಸ್ಟರ್ ಮ್ಯಾರೇಜ್ಗೆ ಸಹಿ ಹಾಕಿದ್ದು, ಅವರು ದೂರು ನೀಡಿದ್ದಾರೆ. ಭಜರಂಗದಳ ಜಿಲ್ಲಾ ಮುಖಂಡರಾದ ಶ್ಯಾಮ್ ಮತ್ತು ಸಾಗರ್ ವಿರುದ್ಧ FIR ದಾಖಲಾಗಿದೆ. 353(1)(c), 353(2), BNS ಅಡಿ FIR ದಾಖಲಾಗಿದೆ.