newsics.com
ಬೆಂಗಳೂರು :ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟಿಸಿ ರುವ ಹಿನ್ನೆಲೆಯಲ್ಲಿ ರೆಬೆಲ್ ಟೀಂ ಇಂದು ಬೆಂಗಳೂರಿನಲ್ಲಿ ಸಭೆ ನಡೆಸುವ ಸಾಧ್ಯತೆ ಇದೆ.
ಯತ್ನಾಳ್ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದ್ದು, ಕುಮಾರ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ, ತಮ್ಮ ಮುಂದಿನ ನಡೆಯೇನೆಂಬುದನ್ನು ಯತ್ನಾಳ್ ಆಗಲಿ, ಅವರ ಬೆಂಬಲಿಗರಾಗಲಿ ಬಿಟ್ಟುಕೊಟ್ಟಿಲ್ಲ.
ಪಂಚಮಸಾಲಿ ಹಾಗೂ ಹಿಂದುಳಿದ ವರ್ಗವನ್ನು ಒಗ್ಗೂಡಿಸುವುದಕ್ಕಾಗಿ ಆರ್‌ಸಿಬಿ ಹೆಸರಿನಲ್ಲಿ ಅಖಾಡಕ್ಕೆ ಇಳಿಯಬೇಕೆಂಬ ಚಿಂತನೆ ಯತ್ನಾಳ್ ಬಣದಲ್ಲಿ ನಡೆ ಯುತ್ತಿದ್ದು, ಶಕ್ತಿವರ್ಧನೆಯ ಲೆಕ್ಕಾಚಾರದಲ್ಲಿದೆ. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚನ್ನಮ್ಮ ಈ ಹೋರಾಟದ ಐಕಾನ್ ಆಗಲಿದ್ದಾರೆ ಎನ್ನಲಾಗುತ್ತಿದೆ.