newsics.com
ತಮಿಳಿನ ನಟಿ ಶೃತಿ ನಾರಾಯಣನ್ ಕಾಸ್ಟಿಂಗ್ ಕೌಚ್ ವಿಡಿಯೋ ಎನ್ನಲಾದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ನಟಿ ತಮ್ಮ ಇನ್ಸ್ಟ್ರಾಗ್ರಾಂ ಖಾತೆಯನ್ನು ಪ್ರೈವೇಟ್ ಮಾಡಿದ್ದಾರೆ.
ತಮಿಳಿನ ಸೂಪರ್ ಹಿಟ್ ಸೀರಿಯಲ್ ‘ಕಾರ್ತಿಕ ದೀಪಂ’ನಲ್ಲಿ ಶೃತಿ ನಟಿಸಿದ್ದಾರೆ. ಸಮಂತಾ ಹಾಗೂ ವರುಣ್ ಧವನ್ ನಟಿಸಿರುವ ವೆಬ್ ಸರಣಿ ‘ಸಿಟಾಡೆಲ್: ಹನಿ ಬನಿ’ಯಲ್ಲಿಯೂ ಶ್ರುತಿ ನಾರಾಯಣ್ ನಟಿಸಿದ್ದಾರೆ .ಇವರ ನಟನೆಗೆ ಒಟಿಟಿ ಅವಾರ್ಡ್ ಸಹ ಪಡೆದುಕೊಂಡಿದ್ದಾರೆ.
14 ನಿಮಿಷಗಳಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾಸ್ಟಿಂಗ್ ಕೌಚ್ ವೇಳೆ, ಅದನ್ನು ರೆಕಾರ್ಡ್ ಮಾಡಿಕೊಂಡು ಲೀಕ್ ಮಾಡಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ತಮ್ಮ ಇನ್ಸ್ಟಾಗ್ರಾಂನ ಖಾತೆಯನ್ನು ಪ್ರೈವೇಟ್ ಮಾಡಿಕೊಂಡಿರುವ ನಟಿ, ತಮ್ಮ ಚಿತ್ರಗಳಿಗೆ ಯಾರೂ ಕಮೆಂಟ್ ಮಾಡದಂತೆ ಮನವಿ ಮಾಡಿದ್ದಾರೆ.