newsics.com
ನವದೆಹಲಿ,: ಅಪ್ರಾಪ್ತ ಜೊತೆಗಿನ ಅಕ್ರಮ ಸಂಬಂಧದಿಂದ ಗರ್ಭವತಿಯಾಗಿದ್ದರಿಂದ ಐಸ್ ಲ್ಯಾಂಡ್ ದೇಶದ ಸಚಿವೆಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಐಸ್‌ಲ್ಯಾಂಡ್ ದೇಶದ ಮಕ್ಕಳ ಕಲ್ಯಾಣ ವಿಭಾಗದ ಸಚಿವೆ ಅಸ್ತಿಲ್ಡರ್ ಲೋವಾ ಥೋರ್ಸ್‌ಡೋಟ್ಟಿರ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ಮೂರು ದಶಕಗಳ ಹಿಂದೆ ತಾನು ಹರೆಯದಲ್ಲಿದ್ದಾಗ ಟೀನೇಜ್ ಹುಡುಗೊಂದಿಗೆ ಸೆಕ್ಸ್ ಮಾಡಿ ಮಗು ಪಡೆದಿದ್ದೆ. ಇದಕ್ಕಾಗಿ ಪಶ್ಚಾತ್ತಾಪದಿಂದ ಈಗ ಮಕ್ಕಳ ಕಲ್ಯಾಣ ಸಚಿವ ಸ್ಥಾನ ಹೇಳಿಕೊಂಡಿದ್ದಾರೆ. ತ್ಯಜಿಸುತ್ತಿದ್ದೇನೆ ಎಂದಿದ್ದಾರೆ.
ಪ್ರಸ್ತುತ 55 ವಯಸ್ಸಿನ ಅಸ್ತಿಲ್ಡರ್ ಲೋವಾ ತಮ್ಮ 22ನೇ ವಯಸ್ಸಿನಲ್ಲಿದ್ದಾಗ 15 ವರ್ಷದ ಹುಡುಗನೊಂದಿಗೆ ಅಕ್ರಮ ಸಂಬಂಧದಿಂದ ಮಗು ಪಡೆದಿದ್ದರಂತೆ. ಈ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದರಿಂದ ಸಚಿವೆ ವಿವಾದಕ್ಕೆ ಸಿಲುಕಿದ್ದರು. ಇದೀಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ವಿವಾದಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಮೂಲಗಳ ಪ್ರಕಾರ ಥೋರ್ಸ್‌ಡೋಟ್ಟಿರ್ ಭಾಗವಹಿಸುತ್ತಿದ್ದ ಧಾರ್ಮಿಕ ಸಭೆಯಲ್ಲಿ ಆ ಟೀನೇಜ್ ಹುಡುಗನ ಪರಿಚಯವಾಗಿತ್ತು ಎಂದು ಥೋರ್ಸ್‌ಡೋಟ್ಟಿರ್ ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ ನನಗೆ 22 ವರ್ಷ ಮತ್ತು ಆತನಿಗೆ 15 ವರ್ಷ ವಯಸ್ಸಾಗಿತ್ತು. ಇಬ್ಬರೂ ಪರಸ್ಪರ ಆಕರ್ಷಿತಗೊಂಡಿದ್ದೆವು. ನನ್ನ ಕಷ್ಟಕರ ಸಮಯದಲ್ಲಿ ಆತನ ಮನೆಯಲ್ಲಿ ಆಶ್ರಯ ಪಡೆದಿದ್ದೆವು. ನನ್ನ 23ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದೆ ಎಂದು ಹೇಳಿಕೊಂಡಿದ್ದಾರೆ.
ಅಂದಹಾಗೆ ಐಸ್ಯ್ ಲ್ಯಾಂಡ್ ನಲ್ಲಿ ಒಪ್ಪಿಗೆಯ ದೈಹಿಕ ಸಂಪರ್ಕದ ವಯಸ್ಸು 15 ವರ್ಷ ಆಗಿದ್ದು, ವ್ಯಕ್ತಿ ಮಾರ್ಗದರ್ಶಕ ಅಥವಾ ಶಿಕ್ಷಕರಾಗಿದ್ದರೆ ಅಥವಾ ಅವರು ನಿಮ್ಮ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿದ್ದರೆ ಅಥವಾ ನಿಮಗಾಗಿ ಕೆಲಸ ಮಾಡುತ್ತಿದ್ದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕ ಸಾಧಿಸುವುದು ಕಾನೂನುಬಾಹಿರವಾಗಿದೆ. ಒಂದು ವೇಳೆ ತಪ್ಪಿತಸ್ಥರೆಂದು ಕಂಡುಬಂದರೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.