ಡೆಹ್ರಾಡೂನ್: ಉತ್ತರಾಖಂಡದ ಚಾರ್‌ಧಾಮ್ ಯಾತ್ರೆಯು ಭಾರತದ ಅತ್ಯಂತ ಪ್ರಸಿದ್ಧ ತೀರ್ಥಯಾತ್ರೆಗಿದ್ದು, ಈಗಾಗಲೇ ಆನ್ಲೈನ್ ಮೂಲಕ ನೋಂದಣಿ ಆರಂಭವಾಗಿದೆ.
ಮೊದಲ ದಿನವೇ ದಾಖಲೆ ಮಟ್ಟದಲ್ಲಿ ಬರೋಬ್ಬರಿ 1.65 ಲಕ್ಷ ಮಂದಿ ಕೇದರಾನಾಥನ ದರ್ಶನಕ್ಕಾಗಿ ಯಾತ್ರಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾ.20 ಗುರುವಾರ ನೋಂದಣಿ ಆರಂಭವಾಗಿದ್ದು, ಸಂಜೆ 5 ಗಂಟೆ ವೇಳೆ 1.6 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ಈ ಬಾರಿಯ ಮೊದಲ ದಿನದ ನೋಂದಣಿಯಲ್ಲಿ 53,570 ಮಂದಿ ಕೇದರನಾಥಕ್ಕೆ
ನೋಂದಾಯಿಸಿಕೊಂಡರೆ, ಬದರಿನಾಥಕ್ಕೆ 49,395, ಗಂಗೋತ್ರಿಗೆ 30,933, ಯಮುನೋತ್ರಿಗೆ 30,224 ಮಂದಿ ನೋಂದಣಿ ಮಾಡಿಕೊಂಡಿದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.