Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > Parenting Tips: ಮಕ್ಕಳನ್ನು ಯಾವಾಗ ಪ್ರತ್ಯೇಕವಾಗಿ ಮಲಗಿಸಬೇಕು?
ರಿಲೇಷನ್‌ಶಿಪ್

Parenting Tips: ಮಕ್ಕಳನ್ನು ಯಾವಾಗ ಪ್ರತ್ಯೇಕವಾಗಿ ಮಲಗಿಸಬೇಕು?

Share
2 Min Read
SHARE

newsics.com

ಮಕ್ಕಳು ಚಿಕ್ಕವರಿದ್ದಾಗ ತಂದೆ-ತಾಯಿಯೊಂದಿಗೆ ಮಲಗುವುದು ಸಹಜ. ಆದರೆ ಮಕ್ಕಳು 8-10 ವರ್ಷವಾಗುತ್ತಿದ್ದಂತೆ ಅವರನ್ನು ಪ್ರತ್ಯೇಕವಾಗಿ ಮಲಗುವ ಅಭ್ಯಾಸವನ್ನು ರೂಢಿಸುವುದು ಪೋಷಕರ ಜವಾಬ್ದಾರಿಗಳಲ್ಲಿ ಒಂದಾಗುತ್ತದೆ.

ಕೆಲವು ಮಕ್ಕಳು ತಮ್ಮ ತಾಯಿಯೊಂದಿಗೆ ಮಲಗಲು ಇಷ್ಟಪಡುತ್ತಾರೆ. ಪ್ರತ್ಯೇಕವಾಗಿ ಮಲಗಲು ಬಯಸುವುದಿಲ್ಲ. ಒಂಟಿಯಾಗಿ ಮಲಗಲು ಹೇಳಿದಾಗಲೆಲ್ಲ ನನಗೆ ಭಯವಾಗುತ್ತದೆ ಎನ್ನುವುದು ಸಾಮಾನ್ಯ ಸಂಗತಿ. ಎಲ್ಲಾ ಪ್ರಯತ್ನ, ತಿಳುವಳಿಕೆ ಹೇಳಿದ ನಂತರವೂ ಅವರು ತಮ್ಮ ಪೋಷಕರೊಂದಿಗೆ ಮಲಗುವುದಾಗಿಯೇ ಹಟ ಹಿಡಿಯುತ್ತಾರೆ. ನೀವು ನಿಮ್ಮ ಮಕ್ಕಳಿಗೆ ಪ್ರತ್ಯೇಕವಾಗಿ ಮಲಗುವುದನ್ನು ಕಲಿಸಬೇಕೆಂದರೆ, ನೇರವಾಗಿ ಅವರ ಹತ್ತಿರ ಹೋಗಿ, ಇಂದಿನಿಂದ ನೀನು ಒಂಟಿಯಾಗಿ ಮಲಗು ಎಂದು ಹೇಳಬೇಡಿ. ಬದಲಿಗೆ ತಜ್ಞರು ಸೂಚಿಸಿದ ಈ ವಿಧಾನವನ್ನು ಅಳವಡಿಸಿಕೊಳ್ಳಿ. ಇದರಿಂದ ಮಕ್ಕಳು ಸುಲಭವಾಗಿ ಒಂಟಿಯಾಗಿ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ.

ನೀವು ನಿಮ್ಮ ಮಗುವಿನ ಹತ್ತಿರ ಹೋಗಿ, ಇಂದಿನಿಂದ ನೀನು ಒಂಟಿಯಾಗಿ ಮಲಗು ಎಂದು ನೇರವಾಗಿ ಹೇಳಬೇಡಿ. ಏಕೆಂದರೆ ಅನೇಕ ಮಕ್ಕಳಿಗೆ ಹೀಗೆ ನೇರವಾಗಿ ಹೇಳುವುದರಿಂದ ಭಾವನಾತ್ಮಕವಾಗಿ ನೊಂದುಕೊಳ್ಳುತ್ತಾರೆ. ಬೆಳೆಯುವುದೇ ಅಪರಾಧ ಎಂಬ ಭಾವನೆ ಅವರಲ್ಲಿ ಮೂಡತೊಡಗುತ್ತದೆ. ಆಗ ಅವರು ಪೋಷಕರನ್ನು ಹೆಚ್ಚೆಚ್ಚು ಅವಲಂಬಿಸಲು ಪ್ರಾರಂಭಿಸುತ್ತಾರೆ. ಆದ್ದರಿಂದ ಮಕ್ಕಳ ಮನಸ್ಸಿನಲ್ಲಿ ಮೊದಲು ವಿಶ್ವಾಸ ಗಳಿಸಿ.

ಮಗುವಿಗೆ 7-8 ವರ್ಷವಾಗಿದ್ದು ಇನ್ನೂ ಪೋಷಕರ ಜೊತೆ ಮಲಗುತ್ತಿದ್ದರೆ, ಅವರಿಗೆ ನೀನೂ ಎಲ್ಲರಂತೆ ಬೆಳೆದಿದ್ದೀ ಎನ್ನುವ ಬಗ್ಗೆ ಸರಿಯಾಗಿ ಅರ್ಥಮಾಡಿಸಿ. ಹೀಗೆ ಮಾಡಲು ಮಗುವಿಗೆ ಏನಾದರೊಂದು ಕೆಲಸ ಕೊಡಿ. ಆ ಕೆಲಸವನ್ನು ಮಗು ಪೂರ್ಣಗೊಳಿಸಿದ ನಂತರ ಮಗುವನ್ನು ಪ್ರಶಂಸೆ ಮಾಡಿ. ನೀನೂ ಕೂಡಾ ಸ್ವತಂತ್ರವಾಗಿ ಕೆಲಸ ಮಾಡಬಹುದು ಎಂಬ ಆತ್ಮವಿಶ್ವಾಸ ಮೂಡಿಸಿ. ಆಗ ಮಗು ಪ್ರತಿಯೊಂದು ಕೆಲಸ ಮಾಡುವ ಬಗ್ಗೆ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳುತ್ತದೆ.

ನೀವು ನಿಮ್ಮ ಮಗುವನ್ನು ನಿರಂತರವಾಗಿ ಈ ರೀತಿ ಪ್ರೇರೇಪಿಸಿದಾಗ, ನಿಮ್ಮ ಮಗುವಿಗೆ ತಾನು ಬೆಳೆಯುತ್ತಿದ್ದೇನೆ ಮತ್ತು ಎಲ್ಲಾ ಕೆಲಸಗಳನ್ನು ಸ್ವತಃ ಮಾಡಲು ಕಲಿಯುತ್ತಿದ್ದೇನೆ ಎನಿಸುತ್ತದೆ. ಮಗುವಿಗೆ ತಾನು ದೊಡ್ಡವನಾಗಿದ್ದೇನೆ ಎನ್ನುವ ಭಾವನೆ ಬರುತ್ತದೆ. ಇದನ್ನು ಮಗುವಿಗೆ ಪ್ರತಿದಿನ ಸುಮಾರು 30 ದಿನಗಳವರೆಗೆ ನಿರಂತರವಾಗಿ ಹೇಳಿದಾಗ, ಅವರಿಗೆ ಈ ವಿಚಾರದ ಬಗ್ಗೆ ನಂಬಿಕೆ ಹೆಚ್ಚಾಗುತ್ತದೆ. ಬದ್ಧತೆ ಬರುತ್ತದೆ.

ನಿಮ್ಮ ಮಗುವಿನ ಆತ್ಮವಿಶ್ವಾಸ ಹೆಚ್ಚಿಸಲು ಹಲವು ದಿನಗಳು ಪ್ರಯತ್ನಿಸಿದ ನಂತರ ಪ್ರತ್ಯೇಕವಾಗಿ ಮಲಗಲು ಸೂಚನೆ ಕೊಡಿ. ಹೀಗೆ ಹೇಳುವುದರಿಂದ, ಕೆಲವೇ ದಿನಗಳಲ್ಲಿ ನಿಮ್ಮ ಮಗು ಯಾವುದೇ ಕೋಪವಿಲ್ಲದೆ ಪ್ರತ್ಯೇಕವಾಗಿ ಮಲಗಲು ಪ್ರಾರಂಭಿಸುತ್ತದೆ.

TAGGED:Parenting Tips: When should children sleep separately?
Share This Article
Facebook Twitter Copy Link Print
Previous Article Bathroom Cleaning: ಮನೆಯಲ್ಲಿ ಬಾತ್‌ರೂಮ್ ಫಳಫಳ ಹೊಳೆಯಲು ಈ ರೀತಿ ಮಾಡಿ
Next Article Relationship ಸಂಬಂಧ ಗಟ್ಟಿಯಾಗಿರಬೇಕಾ? ಜಸ್ಟ್ ಈ ರೀತಿ ಮಾಡಿ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

iPhone effect ಐಫೋನ್ ಇದ್ರೆ ಮಕ್ಕಳಾಗೋದಿಲ್ವಾ? ಅಮೆರಿಕದ ವರದಿ ನೋಡಿ ಜಗತ್ತೇ ತಲ್ಲಣ! ವರದಿ ಹೇಳ್ತಿರೋದೇನು?

6 Min Read
ರಿಲೇಷನ್‌ಶಿಪ್

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?