newsics.com
ಬೆಂಗಳೂರು: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಲುಕ್ಕೇ ಬದಲಾಗಿ ಹೋಗಿದೆ.
ಬಿಗ್ ಬಾಸ್ ಬಳಿಕ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಗಿ ಆಕ್ಟೀವ್ ಆಗಿರುವ ಚೈತ್ರಾ, ದಿನಕ್ಕೊಂದು ಸ್ಟೈಲ್ ನಲ್ಲಿ ಫೋಟೊ ಶೇರ್ ಮಾಡುತ್ತಿರುತ್ತಾರೆ, ಇದೀಗ ಚೈತ್ರಾ ಕುಂದಾಪುರ ಮಹಾರಾಷ್ಟ್ರದ ಬೆಡಗಿಯಾಗಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಶೇರ್ ಮಾಡಿರುವ ಚೈತ್ರಾ, ಕೆಂಪು ಬಣ್ಣದ ಬಾರ್ಡರ್ ಹಾಗೂ ಪಲ್ಲು ಇರುವ, ಹಸಿರು ಬಣ್ಣದ ಸೀರೆ, ಹಾಗೂ ಕೆಂಪು ಬಣ್ಣದ ಬ್ಲೌಸ್ ಧರಿಸಿ ಮಹಾರಾಷ್ಟ್ರ ಸ್ಟೈಲಿನಲ್ಲಿ ಸೀರೆಯುಟ್ಟಿದ್ದಾರೆ. ಅದಕ್ಕೆ ಸರಿಯಾಗಿ ಮಹಾರಾಷ್ಟ್ರದ ಒಡವೆಗಳನ್ನು ಧರಿಸಿ, ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಚೈತ್ರಾ ಕುಂದಾಪುರ ಈ ಲುಕ್ ಸದ್ಯ ಸಖತ್ ವೈರಲ್ ಆಗ್ತಿದೆ.
https://www.instagram.com/reel/DGw746JvsKj/?igsh=MTlncW41OXhsYXNtaw==