newsics.com
ಹರಾಜಿನಲ್ಲಿ ಅಂಡರ್‌ವೇರ್ ಬರೋಬ್ಬರಿ 7 ಲಕ್ಷ ರೂ. ದಾಖಲೆ ಬೆಲೆಗೆ ಸೇಲ್ ಆಗಿದೆ.
ಅಮೆರಿಕದಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ 7 ಲಕ್ಷ ರೂ. ದಾಖಲೆ ಮೊತ್ತಕ್ಕೆ ಅಂಡರ್‌ವೇರ್ ಸೇಲ್ ಆಗಿದೆ. ಇಲ್ಲಿ ನಡೆದ ವಿಶಿಷ್ಟ ಹರಾಜಿನಲ್ಲಿ, ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ (ಜೆಎಫ್‌ಕೆ) ಧರಿಸಿದ್ದ ಒಳ ಉಡುಪು 7.5 ಲಕ್ಷ ರೂ.ಗೆ ಮಾರಾಟವಾಗಿದೆ.
1940 ರ ದಶಕದ ಈ ಒಳ ಉಡುಪುಗಳ ಮೇಲೆ ‘Jack’ ಎಂಬ ಕಸೂತಿ ಮಾಡಲಾಗಿತ್ತು. ಹೆಚ್ಚಿನ ಬಿಡ್‌ನಿಂದಾಗಿ ಈ ಹರಾಜು ಚರ್ಚೆಯ ವಿಷಯವಾಗಿತ್ತು. ಕೊನೆಗೆ ಇದು $9,100 ಡಾಲರ್ ಅಂದ್ರೆ ಸುಮಾರು ರೂ. 7.5 ಲಕ್ಷ ರೂ. ಗೆ ಮಾರಾಟವಾಗಿದೆ. ಅಷ್ಟೇ ಅಲ್ಲದೆ ಈ ಹರಾಜಿನಲ್ಲಿ ಫೇಸ್‌ಬುಕ್ ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ಗೆ ಸೇರಿದ ಹೂಡಿ ಮತ್ತು ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಬೋ ಟೈಯನ್ನು ಕೂಡಾ ಹರಾಜಿನಲ್ಲಿ ಇಡಲಾಗಿತ್ತು. ಇನ್ನೂ ಮಾರ್ಕ್ ಜುಕರ್‌ಬರ್ಗ್ ಹೂಡಿ ಬಟ್ಟೆ $15,875 (ಸುಮಾರು 13 ಲಕ್ಷ ರೂ.) ಗೆ ಮಾರಾಟವಾಯಿತು. ಈ ವಿಶಿಷ್ಟ ಹರಾಜಿನ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.