newsics.com
ಹೊಟೇಲ್ ಅಂತಹ ಸ್ಥಳಗಳಲ್ಲಿ ತನ್ನ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಜನರು ಅನೇಕ ರೀತಿಯ ವಿನೂತನ ಪ್ರಯೋಗಗಳನ್ನು ಮಾಡುತ್ತಾರೆ. ಇಲ್ಲಿಯೂ ಸಹ ಚೀನಾದ ಒಬ್ಬ ಮಹಿಳೆ ವಿಭಿನ್ನವಾದ ರೀತಿಯಲ್ಲಿ ತಮ್ಮ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ.
ಚೀನಾದ ಮಹಿಳೆಯೊಬ್ಬರು ಹೋಟೆಲ್ ರೂಮ್ನಲ್ಲಿ ತಂಗುವಾಗ ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ತುಂಬಾನೇ ಬುದ್ದಿವಂತಿಕೆಯ ಮತ್ತು ಬಜೆಟ್ ಸ್ನೇಹಿಯಾಗಿರುವ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿರುವಂತೆ, ಸಂಭಾವ್ಯ ಗುಪ್ತ ಕಣ್ಗಾವಲು ಸಾಧನಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಗುರಿಯೊಂದಿಗೆ ತನ್ನ ಹೋಟೆಲ್ ಬೆಡ್ ಮೇಲೆ ಒಂದು ಸಣ್ಣ ತಾತ್ಕಾಲಿಕವಾದ ಟೆಂಟ್ ಅನ್ನು ಕಟ್ಟಿಕೊಳ್ಳಲು ಅವರು ದೊಡ್ಡ ಹಗ್ಗವನ್ನು ಮತ್ತು ದೊಡ್ಡ ಬಟ್ಟೆಯನ್ನು ಬಳಸಿದ್ದಾರೆ.
ಡ್ಯಾಂಗ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟ, ಚೀನಾದ ಮಧ್ಯ ಹೆನಾನ್ ಪ್ರಾಂತ್ಯದ ಲುಯೊಯಾಂಗ್‌ನ ಮಹಿಳೆ ಆನ್‌ಲೈನ್‌ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಅವರು ತಮ್ಮ ಹೊಟೇಲ್ ರೂಮ್ನಲ್ಲಿ ಹೇಗೆ ಟೆಂಟ್ ಅನ್ನು ಸ್ಥಾಪಿಸಿದರು ಮತ್ತು ಹೋಟೆಲ್ ಕೋಣೆಗಳಲ್ಲಿ ಗುಪ್ತ ಕ್ಯಾಮೆರಾಗಳ ಬಗ್ಗೆ ತನ್ನ ಕಳವಳವನ್ನು ಹೇಗೆ ದೂರ ಮಾಡಿಕೊಂಡರು ಅಂತ ಹೇಳಿಕೊಂಡಿದ್ದಾರೆ.