newsics.com
ಬರೇಲಿ: ಮದ್ಯದ ಅಮಲಿನಲ್ಲಿದ್ದ ವರನೊಬ್ಬ ಮದುವೆಯ ಹಾರವನ್ನು ವಧುವಿನ ಕೊರಳಿಗೆ ಹಾಕುವ ಬದಲು ತನ್ನ ಸ್ನೇಹಿತನ ಕೊರಳಿಗೆ ಹಾಕಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ವರ ಕುಡಿದಿದ್ದನ್ನು ನೋಡಿ ವಧು ಕೋಪಗೊಂಡ ಸಿ ಮದುವೆಯನ್ನು ರದ್ದುಗೊಳಿಸಿದ್ದಾಳೆ.
ಪೊಲೀಸರು ವರ ಮತ್ತು ಆತನ ತಂದೆಯ ಜೊತೆ ಮಾತನಾಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಈ ಘಟನೆಯ ವಿವರಗಳನ್ನು ವರನಿಂದ ಪೊಲೀಸರು ಕೇಳುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವಧು-ವರರು ಮಾಲೆ ವಿನಿಮಯ ಮಾಡಿಕೊಳ್ಳುವಾಗ ವಧುವು ವರನ ಕುತ್ತಿಗೆಗೆ ಹಾರವನ್ನು ಹಾಕಿದಳು. ಆದರೆ, ಕುಡಿದ ಮತ್ತಿನಲ್ಲಿ ವರನು ವಧುವಿನ ಬದಲು ತನ್ನ ಸ್ನೇಹಿತನ ಕುತ್ತಿಗೆಗೆ ಹಾರ ಹಾಕಿದನು. ಈ ಮುಜುಗರದ ಪರಿಸ್ಥಿತಿಯಿಂದ ಕೋಪಗೊಂಡ ವಧು ಮದುವೆ ನಿರಾಕರಿಸಿ ಮೆರವಣಿಗೆಯನ್ನು ಹಿಂದಕ್ಕೆ ಕಳುಹಿಸಿದ್ದಾಳೆ.
ವಧುವಿನ ಕುಟುಂಬ ಸದಸ್ಯರು ಅವಳನ್ನು ಮದುವೆಗೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವಳು ತನ್ನ ನಿರ್ಧಾರದಲ್ಲಿ ದೃಢವಾಗಿದ್ದಳು. ಆ ವರನನ್ನು ಮದುವೆಯಾಗಲು ನಿರಾಕರಿಸಿದಳು. ವಧುವಿನ ತಂದೆಯ ದೂರಿನ ಆಧಾರದ ಮೇಲೆ, ವರ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.