newsics.com
ಬಾಂಗ್ಲಾದೇಶ ವಿಚಾರವನ್ನು ಮೋದಿಗೆ ಬಿಟ್ಟಿದ್ದೀವಿ, ಅವರೇ ನೋಡಿಕೊಳ್ತಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತ-ಯುಎಸ್ ಸಂಬಂಧಗಳ ಬಗ್ಗೆ ಚರ್ಚಿಸಿದ ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಬಾಂಗ್ಲಾದೇಶ ಬಿಕ್ಕಟ್ಟಿನಲ್ಲಿ ಅಮೆರಿಕದ ಯಾವುದೇ ಪಾತ್ರವಿಲ್ಲ. ಬಾಂಗ್ಲಾದೇಶದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಬಾಂಗ್ಲಾದೇಶದ ಬಿಕ್ಕಟ್ಟಿನಲ್ಲಿ ಅಮೆರಿಕದ ಪಾತ್ರ ಏನೂ ಇಲ್ಲ, ಈ ವಿಷಯವನ್ನು ಪ್ರಧಾನಿ ಮೋದಿ ನಿರ್ವಹಿಸುತ್ತಾರೆ, ನಾನು ಬಾಂಗ್ಲಾದೇಶವನ್ನು ಮೋದಿಗೆ ಬಿಡುತ್ತೇನೆ ಎಂದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಬಾಂಗ್ಲಾದೇಶದ ವಿಷಯವನ್ನು ಟ್ರಂಪ್ ಮುಂದೆ ಪ್ರಸ್ತಾಪಿಸಿದ್ದರು.
ಶೇಖ್ ಹಸೀನಾ ಸರ್ಕಾರದ ಪತನದ ನಂತರ ಬಾಂಗ್ಲಾದೇಶದಲ್ಲಿ ಅವ್ಯವಸ್ಥೆ ಮುಂದುವರೆದಿದೆ. ಈ ಇಸ್ಲಾಮಿಕ್ ದೇಶಗಳಲ್ಲಿ ಜಿಹಾದಿ ಶಕ್ತಿಗಳು ತಲೆ ಎತ್ತಲು ಪ್ರಾರಂಭಿಸಿವೆ, ಇದರಿಂದಾಗಿ ಅಂತಾರಾಷ್ಟ್ರೀಯ ಬೆದರಿಕೆ ಎದುರಾಗಿದೆ. ಹಿಂದಿನ ಬೈಡನ್ ಆಡಳಿತವು ಈ ನಿಲುವನ್ನು ಬೆಂಬಲಿಸಿದ್ದರಿಂದ ಇದು ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಗೆ ಸವಾಲಾಗಿ ಪರಿಣಮಿಸಿದೆ.