newsics.com
ಚಿತ್ರದುರ್ಗ : ಚಿತ್ರದುರ್ಗ ನೆಹರು ನಗರದ ನಿವಾಸಿ ಸುರೇಶ್ ಅವರು ಅಕ್ಟೋಬರ್ 8, 2024ರಂದು ಸಾವನ್ನಪ್ಪಿದ್ದರು. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಸುರೇಶ್ ಅವರನ್ನು ಕಳೆದ 4 ತಿಂಗಳ ಹಿಂದೆಯೇ ಕನಕ ಸರ್ಕಲ್ ಬಳಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು.
ಅಂತ್ಯಕ್ರಿಯೆ ಮಾಡುವಾಗ ಸುರೇಶ್ ತಾಯಿಗೆ ಮೃತ ದೇಹದ ಮೇಲೆ ಗಾಯದ ಗುರುತು ಕಾಣಿಸಿತ್ತು. ಮಗನದ್ದು ಅನಾರೋಗ್ಯದಿಂದ ಬಂದ ಸಾವಲ್ಲ. ಸೊಸೆಯೇ ಕೊಲೆ ಮಾಡಿಸಿದ್ದಾಳೆ ಎಂದು ಆರೋಪ ಮಾಡಿದ್ದರು.
ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಕ್ಕೆ ಸುರೇಶ್ ತಾಯಿ ಉಪ ಲೋಕಾಯುಕ್ತರಿಗೆ ಕಂಪ್ಲೆಂಟ್ ಕೊಟ್ಟಿದ್ದರು. ಕೊನೆಗೆ ಉಪಲೋಕಾಯುಕ್ತ ಕೆ.ಎನ್ ಫಣೀಂದ್ರ ಅವರು ಮರಣೋತ್ತರ ಪರೀಕ್ಷೆಗೆ ಆದೇಶ ನೀಡಿದ್ದಾರೆ. ಈ ಆದೇಶದ ಹಿನ್ನೆಲೆಯಲ್ಲಿ ತಹಶೀಲ್ದಾರ್ ನಾಗವೇಣಿ ಅವರ ಸಮ್ಮುಖದಲ್ಲಿ ಪೊಲೀಸರು ಮೃತ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ.
ಚಿತ್ರದುರ್ಗದ ಸುರೇಶ್ ಮೊಳಕಾಲ್ಮೂರು ತಾಲೂಕು ಕಚೇರಿ ಎಫ್ಡಿಎ ಆಗಿ ಕೆಲಸ ಮಾಡುತ್ತಿದ್ದರು. 14 ವರ್ಷಗಳ ಹಿಂದೆ ನಾಗರತ್ನ ಜೊತೆ ಸುರೇಶ್ ವಿವಾಹ ನಡೆದಿತ್ತು. ಕಳೆದ 4 ತಿಂಗಳ ಹಿಂದೆ ಸುರೇಶ್ ಪತ್ನಿ ನಾಗರತ್ನ ಗಂಡನಿಗೆ ಜಾಂಡೀಸ್ ಕಾಯಿಲೆ ಇದೆ. ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗಿದ್ದಾಗಿ ಹೇಳಿದ್ದರು. FDA ಸುರೇಶ್ ಸತ್ತರೆ ಕೆಲಸ ತನೆಗೆ ಸಿಗುತ್ತೆಂದು ನಾಗರತ್ನ ಕೊಲೆ ಮಾಡಿಸಿದ ಆರೋಪ ಕೇಳಿ ಬಂದಿದೆ. ಹೆಂಡತಿ ಕಿರುಕುಳದ ಬಗ್ಗೆ ಸುರೇಶ್ ಅವರು 2023ರಲ್ಲೇ ಸಂಬಂಧಿಗೆ ಮೆಸೇಜ್ ಮಾಡಿದ್ದರು. ಸುರೇಶ್ ತಾಯಿ ಸರೋಜಮ್ಮ ಇದರ ಆಧಾರದಲ್ಲೂ ದೂರು ನೀಡಿದ್ದಾರೆ. ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.