newsics.com
ಬೆಂಗಳೂರು: ಯಲಹಂಕದಲ್ಲಿ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಕಾರಣ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಫೆಬ್ರವರಿ 5ರಿಂದ ಮೊದಲುಗೊಂಡು ಒಟ್ಟು 29 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಟೇಕಾಫ್, ಲ್ಯಾಂಡಿಂಗ್ ಸ್ಥಗಿತಗೊಳ್ಳಲಿದೆ.
ಈ ಬಗ್ಗೆ ಬೆಂಗಳೂರು ವಿಮಾನ ನಿಲ್ದಾಣ ಆಡಳಿತ ಮಾಹಿತಿ ನೀಡಿದೆ. ಏರ್ ಶೋ ಕಾರ್ಯಕ್ರಮದ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ವಿಮಾನ ಪ್ರಯಾಣಿಕರು ಟೇಕಾಫ್, ಲ್ಯಾಂಡಿಂಗ್ ಸ್ಥಗಿತಗೊಳ್ಳಲಿರುವ ಸಮಯವನ್ನು ಗಮನಿಸಿಕೊಂಡು ಪ್ರಯಾಣದ ಯೋಜನೆ ರೂಪಿಸುವಂತೆ ಬೆಂಗಳೂರು ವಿಮಾನ ನಿಲ್ದಾಣ ಆಡಳಿತ ಸಲಹೆ ನೀಡಿದೆ.