newsics.com
ಮುಂಬೈ: ಇಂಗ್ಲೆಂಡ್ ನ ಮಾಜಿ ಪ್ರಧಾನಿ ಹಾಗೂ ಇನ್ಫೋಸಿಸ್ ಸಹ ಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಭಾನುವಾರ ಮುಂಬೈಗೆ ಭೇಟಿ ನೀಡಿದ್ದು, ಟೆನಿಸ್ ಬಾಲ್ ಕ್ರಿಕೆಟ್ ಆಡಿದ್ದಾರೆ.
ದಕ್ಷಿಣ ಮುಂಬೈನ ಪಾರ್ಸಿ ಜಿಮ್ಖಾನಾಗೆ ಭೇಟಿ ನೀಡಿದ ರಿಷಿ ಸುನಕ್, ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಅಲ್ಲದೆ, ಟೆನಿಸ್ ಬಾಲ್ ಕ್ರಿಕೆಟ್ ಆಟವಿಲ್ಲದೆ ಮುಂಬೈನ ಯಾವುದೇ ಪ್ರವಾಸ ಪೂರ್ಣವಾಗುವುದಿಲ್ಲ ಎಂದಿದ್ದಾರೆ.