newsics.com
ಬೆಂಗಳೂರು : ಕನ್ನಡ ಕಿರುತೆರೆ ನಟಿ ಸಾರಾ ಅಣ್ಣಯ್ಯ ಹೊಸ ಫೋಟೊ ಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ.
ಟ್ರೆಡಿಶನ್ , ಮಾಡರ್ನ್ ಆಗಿ ಫೋಟೊ ಶೂಟ್ ಮಾಡಿಸಿಕೊಳ್ಳುವ ಸಾರಾ, ಒಟ್ಟಲ್ಲಿ ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಮಾಡರ್ನ್ ಟಚ್ ಇರುವ ಟ್ರೆಡಿಶನಲ್ ಲುಕ್ ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.
ಸಾರಾ ಅಣ್ಣಯ್ಯ ಇನ್’ಸ್ಟಾಗ್ರಾಂ ನಲ್ಲಿ ತಮ್ಮ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಶುಭ್ರ ಬಿಳಿ ಬಣ್ಣದ ಲಂಗ, ಬ್ಲೌಸ್ ಅಂದ್ರೆ ಲೆಹೆಂಗಾ ಧರಿಸಿ, ದೊಡ್ಡ ಗಾತ್ರದ ಮೆಟಲ್ ಜುಮುಕಿ ಧರಿಸಿರುವ ಸಾರಾ, ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. ಇವರ ಅಂದ, ಚಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಾರಾ ಅಣ್ಣಯ್ಯ ಕಿರುತೆರೆ ಜನರಿಗೆ ಚಿರಪರಿಚಿತರಾಗಿದ್ದು, ಕನ್ನಡತಿ ಧಾರಾವಾಹಿಯ ಸೈಕೋ ವರುಧಿನಿ ಪಾತ್ರದ ಮೂಲಕ. ಭುವಿಯ ಬೆಸ್ಟ್ ಫ್ರೆಂಡ್ ಆಗಿರುವ ವರೂ ಪಾತ್ರ ನೆಗೆಟೀವ್ ಶೇಡ್ ಆಗಿದ್ದರೂ ಸಹ ಜನರು ಆ ಪಾತ್ರವನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.