newsics.com
ನವದೆಹಲಿ : 2024ರಲ್ಲಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರು 40 ಲಕ್ಷಕ್ಕೂ ಹೆಚ್ಚು ಕ್ಯಾಶ್, 89 ಲ್ಯಾಪ್‌ಟಾಪ್ಸ್, 193 ಮೊಬೈಲ್ಸ್, 9 ಮಂಗಲಸೂತ್ರ ಬಿಟ್ಟುಹೋಗಿದ್ದಾರೆ ಎಂದು ವರದಿಯಾಗಿದೆ.
40.74 ಲಕ್ಷ ನಗದು, 89 ಲ್ಯಾಪ್‌ಟಾಪ್‌ಗಳು, 40 ವಾಚ್‌ಗಳು ಮತ್ತು 193 ಮೊಬೈಲ್‌ಗಳು, 13 ಜೋಡಿ ಕಾಲುಂಗುರಗಳು ಸೇರಿದಂತೆ ಬೆಳ್ಳಿ ಆಭರಣಗಳು ಮೆಟ್ರೋ ಸಿಬ್ಬಂದಿಗೆ ಸಿಕ್ಕಿವೆ. ಇಷ್ಟೇ ಅಲ್ಲ US ಡಾಲರ್ ಸೇರಿ ವಿದೇಶಿ ಕರೆನ್ಸಿ ಕೂಡ ಪತ್ತೆ ಆಗಿತ್ತು ಎನ್ನಲಾಗಿದೆ.ದೆಹಲಿ ಮೆಟ್ರೋದಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ 262 ಮಕ್ಕಳನ್ನು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಲಾಗಿದೆ. ಸಂಕಷ್ಟದಲ್ಲಿ ಸಿಲುಕಿದ 671 ಮಹಿಳಾ ಪ್ರಯಾಣಿಕರಿಗೆ ಕೂಡ ಸಹಾಯ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಯಾರ ವಸ್ತುಗಳು ಎಂದು ಪರಿಶೀಲಿಸಿ ಮೆಟ್ರೋ ಸಿಬ್ಬಂದಿ ಮಾಲೀಕರಿಗೆ ತಲುಪಿಸಿದ್ದಾರೆ ಎಂದು ತಿಳಿದು ಬಂದಿದೆ.