newsics. Com
ಮುಂಬೈ: ಕಳ್ಳತನಕ್ಕೆ ಬಂದ ಮನೆಯಲ್ಲಿ ಏನೂ ಸಿಗದಿದ್ದಕ್ಕೆ ಮನೆಯೊಡತಿಗೆ ಕಿಸ್ ಕೊಟ್ಟು ಕಳ್ಳರು ಪರಾರಿಯಾಗಿರುವ ಘಟನೆ
ಮುಂಬೈನ ಮಲಾಡ್ ಪ್ರದೇಶದಲ್ಲಿ ನಡೆದಿದೆ.
ಈ ವಿಚಿತ್ರ ಘಟನೆ ಜ.03 ರಂದು ನಡೆದಿದ್ದು, ಈ ಕುರಿತು ಮಹಿಳೆ ಕುರಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಮಹಿಳೆ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಮಹಿಳೆ ಮನೆಯಲ್ಲಿ ಒಬ್ಬರೇ ಇರುವಾಗ ಆರೋಪಿ ಒಳನುಗ್ಗಿದ್ದಾನೆ, ಬಳಿಕ ಒಳಗಿನಿಂದ ಬಾಗಿಲನ್ನು ಲಾಕ್ ಮಾಡಿದ್ದಾನೆ. ಮನೆಯಲ್ಲಿದ್ದ ಮಹಿಳೆಯನ್ನು ನೋಡಿದ್ದೇ ತಡ ಆರೋಪಿ ಆಕೆಯ ಬಾಯಿಯನ್ನು ಮುಚ್ಚಿ, ಮನೆಯಲ್ಲಿರುವ ಮೊಬೈಲ್ ಫೋನ್, ಎಟಿಎಂ ಕಾರ್ಡ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಧಮ್ಕಿ ಹಾಕಿದ್ದಾನೆ. ಆಗ ಮಹಿಳೆ ನನ್ನ ಬಳಿ ಯಾವುದೇ ಬೆಲೆಬಾಳುವ ವಸ್ತುಗಳು ಇಲ್ಲ ಎಂದು ತಿಳಿಸಿದ್ದಾಳೆ. ಈ ವೇಳೆ ಇದನ್ನು ಕೇಳಿಸಿಕೊಂಡ ಆರೋಪಿ ಆಕೆಗೆ ಕಿಸ್ ಕೊಟ್ಟು ಎಸ್ಕೇಪ್ ಆಗಿದ್ಧಾನೆ.