newsics.com
ಟಿಬೆಟ್‌ನಲ್ಲಿ ಆರು ಸರಣಿ ಭೂಕಂಪನಗಳು ಸಂಭವಿಸಿದ ಪರಿಣಾಮ ಒಟ್ಟು 53ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
7.1 ತೀವ್ರತೆಯ ಭೂಕಂಪನವೂ ಸೇರಿದಂತೆ ಒಟ್ಟೊಟ್ಟಿಗೆ ಟಿಬೆಟ್‌ನಲ್ಲಿ ಒಟ್ಟು ಆರು ಭೂಕಂಪಗಳು ಸಂಭವಿಸಿವೆ.
ಈ ಭೂಕಂಪನದ ಪರಿಣಾಮ ಭಾರತದ ಮೇಲೂ ಆಗಿದ್ದು, ಭಾರತ, ನೇಪಾಳ ಭೂತಾನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಸ್ಥಳೀಯ ವರದಿಗಳನ್ನು ಆಧರಿಸಿ ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದ್ದು, ಈ ದುರಂತದಲ್ಲಿ ಒಟ್ಟು 53 ಜನ ಸಾವನ್ನಪ್ಪಿದ್ದಾರೆ. ಟಿಬೇಟಿಯನ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ ಎಂದು ಚೀನಾದ ನ್ಯೂಸ್ ಏಜೆನ್ಸಿ ಕ್ಸಿನ್ಹುವಾ ವರದಿ ಮಾಡಿದೆ.
ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.
ಚೀನಾದ ಮಾಧ್ಯಮಗಳ ಪ್ರಕಾರ, ಭೂಕಂಪ ಸಂಭವಿಸಿದ ಸ್ಥಳಗಳಲ್ಲಿ ಹಲವು ಕಟ್ಟಡಗಳು ಕುಸಿದಿವೆ, ಟಿಬೆಟ್‌ನ ಡಿಂಗ್ರಿ ಕೌಂಟಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಬಲವಾದ ಕಂಪನಗಳನ್ನು ಅನುಭವಿಸಿವೆ.
ಇದರ ಪರಿಣಾಮ ಭಾರತ ಕೆಲ ಪ್ರದೇಶಗಳಲ್ಲೂ ಅನುಭವಕ್ಕೆ ಬಂದಿವೆ. ದೆಹಲಿ ಎನ್‌ಸಿಆರ್ ಮತ್ತು ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮತ್ತು ರಾಜ್ಯದ ಉತ್ತರ ಭಾಗದ ಅನೇಕ ಸ್ಥಳಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಭೂಕಂಪನದ ಅನುಭವವಾಗಿದೆ.
ಧರ್ಮಸ್ಥಳದಲ್ಲೂ ತಿರುಪತಿ ಮಾದರಿ ಕ್ಯು ವ್ಯವಸ್ಥೆ: ಹೊಸ ಸಂಕೀರ್ಣ ಮಂಗಳವಾರ ಉದ್ಘಾಟನೆ