newsis.com
ಬೆಳಗಾವಿ :ಗಂಡನ ಫ್ರೆಂಡ್ ಜತೆ ಇಬ್ಬರು ಮಕ್ಕಳ ತಾಯಿ ಪರಾರಿಯಾಗಿದ್ದಾಳೆ. ಈ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಆಸೀಫ್ ಸೈಯ್ಯದ್ ವೃತ್ತಿಯಲ್ಲಿ ಡ್ರೈವರ್, ಪತಿ 28 ವರ್ಷದ ಮಾಸಾಬಿ ಹೌಸ್ ವೈಫ್. ಮಾಹಿರಾ ಹಾಗೂ ಅನಿಯಾ 7 ಮತ್ತು 2 ವರ್ಷದ ಮುದ್ದಾದ ಇಬ್ಬರು ಮಕ್ಕಳು. ಇವ್ರು ಬೆಳಗಾವಿ ಬಳಿಯ ಮಾರಿಹಾಳ ಗ್ರಾಮದ ನಿವಾಸಿಗಳು. ಆಸೀಫ್, ಮದುವೆ ಬಳಿಕ ಪತ್ನಿಯ ತವರು ಮಾರಿಹಾಳದಲ್ಲೇ ನೆಲೆಸಿದ್ದ.
ಏಳು ವರ್ಷಗಳ ಕಾಲ ಸಂಸಾರದಲ್ಲಿ ಇತ್ತೀಚೆಗೆ ಬಿರುಗಾಳಿ ಬೀಸಿತ್ತು. ಅದೇನಾಯ್ತೋ ಏನೋ ಇದೇ ಗ್ರಾಮದ ಬಸವರಾಜ ಸೀತಿಮನಿ ಎಂಬಾತನ ಜೊತೆ ಮಾಸಾಬಿ ತನ್ನಿಬ್ಬರು ಮಕ್ಕಳ ಸಮೇತ ಪರಾರಿಯಾಗಿದ್ದಾಳೆ.
2 ಸೈಟ್ ದಾಖಲೆಗಳು, 60 ಗ್ರಾಂ ಚಿನ್ನ, ಮನೆಯಲ್ಲಿಟ್ಟಿದ್ದ 5 ಲಕ್ಷ ರೂ. ಹಣ ಹಾಗೂ ಇಬ್ಬರು ಮಕ್ಕಳ ಜೊತೆ ಪತ್ನಿ ಮಾಸಾಬಿ ಪರಾರಿಯಾಗಿದ್ದಾಳೆ. ಬಸವರಾಜ್ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಹೆಂಡತಿ- ಇಬ್ಬರು ಮಕ್ಕಳನ್ನು ಕಾಣದೇ ನೊಂದಿರುವ ಪತಿ ಆಸೀಫ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಕಿಡ್ನಾಪ್ ಪ್ರಕರಣ ದಾಖಲಿಸಲು ಮುಂದಾಗಿದ್ದಾನೆ.