newsics.com
ಬೆಳಗಾವಿ : ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅಶ್ಲೀಲ ಪದ ಬಳಕೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಡಿಯೋ ರಿಲೀಸ್ ಮಾಡಿದ್ದಾರೆ.
ಹೌದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಟಿ ರವಿ ಆಡಿದ ಮಾತಿರುವ ವಿಡಿಯೋ ರಿಲೀಸ್ ಮಾಡಿದ್ದಾರೆ. ಸಿಟಿ ರವಿ ಆಕ್ಚೇಪಾರ್ಹ ಹೇಳಿಕೆ ಇರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸಿ.ಟಿ ರವಿ ಬಳಸಿದ ಪದ ಬಳಕೆಯ ವಿಡಿಯೋ ರೀಲಿಸ್ ಮಾಡಿ ಬಿಜೆಪಿಗೆ ಕೌಂಟರ್ ಕೊಟ್ಟಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್. ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿಡಿಯೋ ರಿಲೀಸ್ ಮಾಡಿ ಠಕ್ಕರ್ ಕೊಟ್ಟಿದ್ದಾರೆ. ಎರಡು ಪ್ರತ್ಯೇಕ ವಿಡಿಯೋ ರಿಲೀಸ್ ಮಾಡಿ ಬಿಜೆಪಿ ನಾಯಕರಿಗೆ ಕೌಂಟರ್ ಕೊಟ್ಟಿದ್ದಾರೆ.
ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಳಸಿದ ಅಶ್ಲೀಲ ಪದ ಬಳಕೆಯ ವಿಡಿಯೋವನ್ನು ಸಚಿವರು ಮಾಧ್ಯಮಗಳ ಎದುರು ಬಿಡುಗಡೆ ಮಾಡಿದರು. ಎರಡು ಪ್ರತ್ಯೇಕ ವಿಡಿಯೋಗಳನ್ನು ಸಚಿವರು ರಿಲೀಸ್ ಮಾಡಿದರು. ಒಂದು ವಿಡಿಯೋದಲ್ಲಿ ಸಿ.ಟಿ. ರವಿ ಸಚಿವರಿಗೆ ಆಕ್ಷೇಪಾರ್ಹ ಪದ ಬಳಸಿದ್ದರೆ, ಮತ್ತೊಂದು ವಿಡಿಯೋದಲ್ಲಿ ರಾಹುಲ್ ಗಾಂಧಿಗೆ ಡ್ರಗ್ ಅಡಿಟ್ ಅಂದಿದ್ದ ವಿಡಿಯೋವನ್ನು ಸಚಿವರು ಬಿಡುಗಡೆ ಮಾಡಿದರು.