newsics.com
ಅಂಕೋಲಾ (ಉತ್ತರ ಕನ್ನಡ): ಕಾರವಾರಕ್ಕೆ ಸಾಗುತ್ತಿದ್ದ ಕಾರು ಹಾರವಾಡಾ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿಗೆ ಬಡಿದು ಪಕ್ಕದ ಕೃಷಿ ಜಮೀನಿನಲ್ಲಿ ತಲೆಕೆಳಗಾಗಿ ಬಿದ್ದಿದೆ.
ಈ ಘಟನೆಯಲ್ಲಿ ಓರ್ವ ಪಾದಚಾರಿ ಮೃತಪಟ್ಟಿದ್ದಾನೆ. ತಾಲೂಕಿನ ಹಾರವಾಡಾ ರೈಲ್ವೇ ಬ್ರಿಜ್ ಬಳಿ ಸೋಮವಾರ ಈ ಘಟನೆ ನಡೆದಿದೆ.
ಅಮದಳ್ಳಿ ನಿವಾಸಿ ಸೋಮು ಗೌಡ ಮೃತಪಟ್ಟ ವ್ಯಕ್ತಿ. ಮುರ್ಡೇಶ್ವರದಿಂದ ಕಾರವಾರಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮುಂಬೈ ಮೂಲದ ದೀಪಕ ದೇಸಾಯಿ, ಪ್ರಿಯಾ ದೇಸಾಯಿ ಕಾರು ಚಾಲಕ ವಿಶಾಲ ದಾಮೋಧರ ಬಾನಾವಾಳಿಕರ ಎಂಬುವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
KPCC president ಅಧಿವೇಶನದ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಾಧ್ಯತೆ
Drone Prathap ಸೋಡಿಯಂ ಸ್ಪೋಟ ಕೇಸ್ : ಡ್ರೋನ್ ಪ್ರತಾಪ್’ ಗೆ ಜಾಮೀನು ಮಂಜೂರು