newsics.com
ಬಿಗ್ ಬಾಸ್ ಸೀಸನ್ 11 ಮತ್ತೊಂದು ಸೂಪರ್ ಸಂಡೇಗೆ ಸಾಕ್ಷಿಯಾಗುತ್ತಿದೆ. ಆದರೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಇವತ್ತು ಟ್ವಿಸ್ಟ್ ಮೇಲೆ ಟ್ವಿಸ್ಟ್‌ಗಳು ಕಾದಿದೆ. ಹೌದು, ಈಗಾಗಲೇ ನಾಲ್ವರು ಎಲಿಮಿನೇಟ್ ಆಗಿದ್ದು, ಈ ವಾರ ಮನೆಯಿಂದ ಯಾರು ಹೊರಗೆ ಬರ್ತಾರೆ ಅನ್ನೋದು ಸಸ್ಪೆನ್ಸ್ ಆಗಿ ಉಳಿದಿದೆ.
ಸೂಪರ್ ಸಂಡೇ ಶೋನಲ್ಲಿ ಕಿಚ್ಚ ಸುದೀಪ ಅವರು ಮನೆಯ ಸದಸ್ಯರಿಗೆ ಒಂದು ಸ್ಪೆಷಲ್ ಟಾಸ್ಕ್ ನೀಡಿದ್ದಾರೆ. ನಿಮ್ಮ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ ಇವರ ಇಂಪಾರ್ಟೆನ್ಸ್ ಇಲ್ಲ ಎನ್ನುವವರು ಅವರ ಫೋಟೋವನ್ನು ಮೂಟೆಗೆ ಅಂಟಿಸಿ ಕಸದ ಬುಟ್ಟಿಗೆ ಹಾಕಬೇಕು. ಈ ಆಟದಲ್ಲಿ ಬಿಗ್ ಬಾಸ್ ಮನೆಯ ಬಹುತೇಕ ಎಲ್ಲರೂ ಚೈತ್ರಾ ಕುಂದಾಪುರ ಅವರ ಮೇಲೆ ತಿರುಗಿದ್ದಾರೆ.
ಭವ್ಯ, ಮೋಕ್ಷಿತಾ, ರಜತ್, ಐಶ್ವರ್ಯಾ, ಗೌತಮಿ, ಹನುಮಂತ ಎಲ್ಲರೂ ಚೈತ್ರಾ ಕುಂದಾಪುರ ಅವರನ್ನೇ ಕಸದ ಬುಟ್ಟಿಗೆ ಹಾಕಿದ್ದಾರೆ. ಇದಕ್ಕೆ ಪ್ರತಿಯೊಬ್ಬರು ಸೂಕ್ತವಾದ ಕಾರಣಗಳನ್ನ ನೀಡಿದ್ದು, ಚೈತ್ರಾ ಅವರ ಕಣ್ಣು ನಿಜಕ್ಕೂ ಕೆಂಪಾಗಿದೆ.
https://www.instagram.com/reel/DD3PQj3iou5/?igsh=MWlxamR0dDZrYXd1aw==